ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟು? ಇಲ್ಲಿದೆ ಮಾಹಿತಿ | Gold Price

gold
Published on

Gold Price: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ಸಮರದಿಂದಾಗಿ ಇತ್ತೀಚೆಗೆ ತೀವ್ರವಾಗಿ ಏರಿಕೆಯಾಗಿದ್ದ ಚಿನ್ನದ ಬೆಲೆ ಇದೀಗ ಕ್ರಮೇಣವಾಗಿ ಕುಸಿಯುತ್ತಿದೆ. ಇನ್ನೇನು ಮದುವೆ ಸೀಸನ್​ಗಳು ಶುರುವಾಗಲಿದ್ದು, ಚಿನ್ನದ ಬೆಲೆ ಮಾತ್ರ ಗಗನಕ್ಕೇರುತ್ತಲೇ ಇದೆ. ಇದರಿಂದ ಕಂಗಾಲಾಗಿರುವ ಚಿನ್ನದ ಗ್ರಾಹಕರು, ಖರೀದಿಯಿಂದ ಕೊಂಚ ದೂರ ಸರಿದಿದ್ದಾರೆ.

ಶುಕ್ರವಾರ (ಮೇ.02) ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 220 ರೂ. ಕುಸಿತ ಕಂಡಿದೆ. 22 ಕ್ಯಾರೆಟ್ ಚಿನ್ನವು 200 ರೂ. ಕಡಿಮೆಯಾಗಿದೆ. ಆದಾಗ್ಯೂ, ಕಳೆದ ಕೆಲವು ದಿನಗಳಿಂದ ಚಿನ್ನದ ದರವು ಗಣನೀಯವಾಗಿ ಕುಸಿತ ಕಾಣುತ್ತಿದೆ. ಈ ಅನುಕ್ರಮದಲ್ಲಿ, ಕಳೆದ ಹತ್ತು ದಿನಗಳಲ್ಲಿ 24 ಕ್ಯಾರೆಟ್ ಚಿನ್ನ ಬೆಲೆ 5,678 ರೂ. ಇಳಿದಿದೆ. ಮತ್ತೊಂದೆಡೆ, ಬೆಳ್ಳಿಯ ಬೆಲೆ ಹೆಚ್ಚಾಗಿದ್ದು, ಕೆಜಿ ಬೆಳ್ಳಿಗೆ 2,000 ರೂ. ಹೆಚ್ಚಾಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಹೀಗಿದೆ ಇಂದಿನ ಬೆಲೆ

  • ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 87,700 ರೂ. ಆಗಿದ್ದರೆ, 24 ಕ್ಯಾರೆಟ್‌ನ ಬೆಲೆ 95,660 ರೂ. ತಲುಪಿದೆ.
  • ಮುಂಬೈ, ಬೆಂಗಳೂರು, ಚೆನ್ನೈ ನಗರಗಳಲ್ಲಿ, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 87,550 ರೂ. ಆಗಿದ್ದರೆ, 24 ಕ್ಯಾರೆಟ್‌ನ ಬೆಲೆ 95,510 ರೂ. ತಲುಪಿದೆ.
  • ಇನ್ನು ಹೈದರಾಬಾದ್, ವಿಜಯವಾಡ, ವಿಶಾಖಪಟ್ಟದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 87,550 ರೂ. ಆಗಿದ್ದರೆ, 24 ಕ್ಯಾರೆಟ್‌ನ ಬೆಲೆ 95,510 ರೂ. ಆಗಿದೆ.

ಹೀಗಿದೆ ಬೆಳ್ಳಿ ಬೆಲೆ

  • ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 98,000 ರೂ. ಆಗಿದೆ.
  • ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 1,09,000 ರೂ.ಗೆ ತಲುಪಿದೆ.

ನಿಮ್ಮ ಗಮನಕ್ಕೆ: ಮೇಲೆ ತಿಳಿಸಲಾದ ದರ ಇಂದು ಬೆಳಗ್ಗೆ 10 ಗಂಟೆಯವರೆಗೆ ದಾಖಲಾದ ಮಾಹಿತಿ. ಚಿನ್ನ-ಬೆಳ್ಳಿ ಬೆಲೆಗಳು ದಿನಕ್ಕೆ ಹಲವು ಬಾರಿ ಏರುಪೇರು ಆಗುತ್ತಿರುತ್ತವೆ. ನಿಖರವಾದ ಬೆಲೆಗಳಿಗಾಗಿ, ನಿಮ್ಮ ಹತ್ತಿರದ ಆಭರಣ ಮಳಿಗೆ ಅಥವಾ ಅಧಿಕೃತ ವೆಬ್​ಸೈಟ್​ ದರ ಪರಿಶೀಲಿಸಿ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net