ಬಿಸಿ ಬಿಸಿ ಐಸ್​ಕ್ರೀಂ ಪಕೋಡಾ! ತಿಂಡಿ ಪ್ರಿಯರೇ ನೀವು ನೋಡಲೇಬೇಕಾದ ವಿಡಿಯೋ ಇದು

ವಿಜಯವಾಣಿ-6-3
Published on

ನವದೆಹಲಿ: ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ವಿಚಿತ್ರ, ವಿಭಿನ್ನ ಹಾಗೂ ಊಹೆಗೂ ಮೀರಿದ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುವ ಮೂಲಕ ನೆಟ್ಟಿಗರ ಗಮನಸೆಳೆಯುತ್ತದೆ. ಕೆಲವೊಂದು ದೃಶ್ಯಗಳನ್ನು ಕಣ್ತುಂಬಿಕೊಳ್ಳುವ ನೋಡುಗರು ಕಮೆಂಟ್ ಮೂಲಕ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಆದ್ರೆ, ಇನ್ನೂ ಒಂದಷ್ಟು ವಿಡಿಯೋಗಳು ಮಾತ್ರ ಭಾರೀ ಅಚ್ಚರಿಗೆ ದೂಡುತ್ತದೆ. ಅಂತಹದ್ದೇ ಒಂದು ವಿಚಿತ್ರ ದೃಶ್ಯವೊಂದು ಜಾಲತಾಣಗಳಲ್ಲಿ ಹರಿದಾಡಿದ್ದು, ತಿಂಡಿ ಪ್ರಿಯರಿಂದ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

ಪ್ರತಿಯೊಬ್ಬರು ಬಿಸಿ ಬಿಸಿ ಬೊಂಡಾ, ಬಜ್ಜಿ, ಪಕೋಡಾವನ್ನು ತಿಂದಿರುತ್ತೀರಿ. ಆದ್ರೆ, ಎಂದಾದರೂ ಐಸ್​ಕ್ರೀಂ ಪಕೋಡಾ ತಿಂದಿದ್ದೀರಾ? ತಿಂದಿರಲು ಸಾಧ್ಯವೇ ಇಲ್ಲ. ಯಾಕಂದ್ರೆ, ಈ ವಿಷಯದಲ್ಲಿ ಊಹಿಸಿಕೊಳ್ಳುವುದು ಕಷ್ಟಸಾಧ್ಯ! ಇನ್ನು ಅದನ್ನು ನೋಡುವುದು ಬಹಳ ಆಶ್ಚರ್ಯಕರ ಸಂಗತಿ. ಸದ್ಯ ಈ ವಿಡಿಯೋ ನೋಡಿದ ತಿಂಡಿ ಪ್ರಿಯರು ಒಂದು ನಿಮಿಷ ಭಾರೀ ಅಚ್ಚರಿಗೆ ಒಳಗಾಗಿದ್ದು, ಹೀಗೂ ಮಾಡ್ತಾರಾ? ಇದು ಎಲ್ಲಿ? ಎಂಬ ಸರಣಿ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ಇಲ್ಲೊಬ್ಬ ವ್ಯಾಪಾರಿ ಚಾಕೋಬಾರ್​, ನಟ್ಟಿ ಐಸ್​ಕ್ರೀಂ ಸ್ಟಿಕ್​ಗಳನ್ನು ಬಜ್ಜಿ ಹಿಟ್ಟಿನಿಂದ ಲೇಪಿಸಿ ಕುದಿಯುತ್ತಿರುವ ಎಣ್ಣೆಯೊಳಗೆ ಬಿಡುವ ಮೂಲಕ ಐಸ್​ಕ್ರೀಂ ಪಕೋಡಾ ತಯಾರಿಸುತ್ತಿದ್ದಾನೆ. ಸದ್ಯ ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೋಡುಗರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಇದು ನಮ್ಮ ಊಹೆಗೂ ಮೀರಿದೆ. ಇದನ್ನು ನೋಡ್ತಿದ್ರೆ, ಇನ್ಮುಂದೆ ಐಸ್​ಕ್ರೀಂ ತಿನ್ನೋದೇ ಬೇಡ ಎನಿಸುತ್ತದೆ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net