

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆ ಆಗಿರುವುದರಿಂದ ದೇಶಿಯ ಮಾರುಕಟ್ಟೆಯಲ್ಲೂ ದರ ಕಡಿಮೆಯಾಗಿದೆ.
ಸೋಮವಾರ (ನ.25) ಇಲ್ಲಿನ ಚಿನಿವಾರ ಪೇಟೆಯಲ್ಲಿ ನಡೆದ ವಹಿವಾಟಿನಲ್ಲಿ 10 ಗ್ರಾಂ ಚಿನ್ನದ ದರವು (ಶೇ.99.9 ಪರಿಶುದ್ಧತೆ) 1 ಸಾವಿರ ರೂ. ಇಳಿಕೆಯಾಗಿದ್ದು, 79,400 ರೂ. ಆಗಿದೆ. ಸ್ಟಾಂಡರ್ಡ್ ಚಿನ್ನದ (ಶೇ.99.5 ಪರಿಶುದ್ಧತೆ) ದರವು ಕೂಡ 1 ಸಾವಿರ ರೂ. ಇಳಿಕೆಯಾಗಿ 79 ಸಾವಿರ ರೂ.ಗೆ ತಲುಪಿದೆ.
ಬೆಳ್ಳಿ ಧಾರಣೆಯು ಕೆ.ಜಿಗೆ 1,600 ರೂ. ಇಳಿದು, 91,700 ರೂ.ನಂತೆ ಮಾರಾಟವಾಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.