

ಲಕ್ನೋ: ಲಕ್ನೋದಲ್ಲಿ 700 ನಿರುದ್ಯೋಗಿಗಳಿಂದ 2 ಕೋಟಿ ರೂ.ಗೂ ಹೆಚ್ಚು ಹಣ ವಂಚಿಸಿದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಸಿಕ್ಕಿಬಿದ್ದವರು ನಕಲಿ ಕಾಲ್ ಸೆಂಟರ್ ಗಳನ್ನು ತೆರೆದು ಉದ್ಯೋಗ ನೀಡುವ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದರು. ಈ ವಂಚಕರು ತಮ್ಮ ಕಾಲ್ ಸೆಂಟರ್ಗಳಲ್ಲಿ ಎಂಟೆಕ್ ಮತ್ತು ಬಿಟೆಕ್ ಪಾಸ್ ಆದ ಯುವಕರನ್ನು ನೇಮಿಸಿಕೊಂಡಿದ್ದರು. ಯುಪಿ ಎಸ್‌ಟಿಎಫ್‌ನ ದಾಳಿಯಲ್ಲಿ ಅವರನ್ನು ಬಂಧಿಸಲಾಗಿದೆ.
ಮಾಹಿತಿಯ ಪ್ರಕಾರ, ಲಕ್ನೋದ ಇಂದಿರಾನಗರದಲ್ಲಿ ಕಾಲ್ ಸೆಂಟರ್ ನಡೆಸಲಾಗುತ್ತಿದ್ದು, ಅದರಲ್ಲಿ ಇಂಟರ್ನೆಟ್ ಮತ್ತು ಇತರ ವಿಧಾನಗಳ ಮೂಲಕ ನಿರುದ್ಯೋಗಿಗಳ ಸಂಖ್ಯೆಯನ್ನು ಕಂಡುಹಿಡಿಯಲಾಯಿತು. ಇದಾದ ನಂತರ ಕೆಲಸ ಕೊಡಿಸುವುದಾಗಿ ಕರೆ ಮಾಡಿ ಎರಡ್ಮೂರು ಬಾರಿ 50 ನಾವಿರದಿಂದ 1 ಲಕ್ಷ ರೂಪಾಯಿ ವಸೂಲಿ ಮಾಡಲಾಗಿತ್ತು.
ಬಂಧಿತ ವಂಚಕರು ಕಳೆದ ಮೂರು ವರ್ಷಗಳಿಂದ ಈ ಕಾಲ್ ಸೆಂಟರ್ ನಡೆಸುತ್ತಿದ್ದಾರೆ. ಈ ಮೊದಲು ಅವರ ಈ ಕಾಲ್ ಸೆಂಟರ್ ಅನ್ನು ಗಾಜಿಯಾಬಾದ್‌ನಲ್ಲಿ ತೆರೆಯಲಾಗಿತ್ತು, ಇದಕ್ಕಾಗಿ ಆರೋಪಿಗಳು ಪ್ರಿ-ಆಕ್ಟಿವೇಟೆಡ್ ಸಿಮ್ ಖರೀದಿಸುತ್ತಿದ್ದರು. ಈ ಸಿಮ್‌ಗಳನ್ನು ದೆಹಲಿಯಿಂದ ದುಪ್ಪಟ್ಟು ಅಥವಾ ಮೂರು ಪಟ್ಟು ಬೆಲೆಗೆ ಖರೀದಿಸಲಾಗಿದೆ. ನಂತರ ಈ ಸಂಖ್ಯೆಗಳ ಮೂಲಕ ನಿರುದ್ಯೋಗಿಗಳನ್ನು ಸಂಪರ್ಕಿಸಲಾಯಿತು. ವಂಚಕರು ಕರೆ ಮಾಡಲು ಹುಡುಗರನ್ನು ನೇಮಿಸಿಕೊಂಡಿದ್ದರು, ಅದರಲ್ಲಿ ಬಿ.ಟೆಕ್ ಮತ್ತು ಎಂ.ಟೆಕ್ ಪಾಸ್ ಆದವರು ಸೇರಿದ್ದರು. ಅವರಿಗೆ 16-20 ಸಾವಿರ ಸಂಬಳ ನೀಡಿದ್ದು, ನಿರುದ್ಯೋಗಿಗಳಿಗೆ ಇವರು ಕರೆ ಮಾಡುತ್ತಿದ್ದರು.
ಬಂಧಿತ ವಂಚಕರ ಜಾಲ ಸುಮಾರು 12 ಜಿಲ್ಲೆಗಳಲ್ಲಿ ವ್ಯಾಪಿಸಿದೆ. ಬೇರೆ ಬೇರೆ ಜಿಲ್ಲೆಗಳಲ್ಲಿ ತನ್ನ ಏಜೆಂಟರನ್ನು ಕೂಡ ಇಟ್ಟುಕೊಂಡಿದ್ದಾರೆ. ಈ ಸಂಪೂರ್ಣ ಪ್ರಕರಣದಲ್ಲಿ ಮಿರ್ಜಾಪುರದ ರಾಜನ್ ಶ್ರೀವಾಸ್ತವ, ಗೋರಖ್‌ಪುರದ ರಾಕೇಶ್ ಶರ್ಮಾ, ಪ್ರತಾಪ್ಗಢದ ಸುರೇಂದ್ರ ಪ್ರತಾಪ್ ಸಿಂಗ್ ಮತ್ತು ಹರ್ದೋಯ್‌ನ ಸೋಮೇಂದ್ರ ತಿವಾರಿ ಅವರನ್ನು ಲಕ್ನೋದ ಫ್ಲಾಟ್‌ನಿಂದ ಎಸ್‌ಟಿಫ್ ಬಂಧಿಸಿದೆ.
ಎಸ್‌ಟಿಎಫ್ ಎಡಿಜಿ ಅಮಿತಾಬ್ ಯಶ್ ಪ್ರಕಾರ, ಮಾಹಿತಿ ಪಡೆದ ನಂತರ ತಂಡವನ್ನು ರಚಿಸಿ ದಾಳಿ ನಡೆಸಲಾಯಿತು. ನಂತರ ನಾಲ್ವರನ್ನು ಬಂಧಿಸಲಾಯಿತು. ಕೆಲವು ವಂಚಕರು ನಿರುದ್ಯೋಗಿಗಳಿಗೆ ವಂಚಿಸುವ ಕೆಲಸ ಮಾಡುತ್ತಿದ್ದಾರೆ ಎಂಬ ಸುದ್ದಿ ಬಂದಿದೆ. ಸದ್ಯ ಬಂಧಿತ ವಂಚಕರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.