ಗೆಳೆಯನಿಂದ 18 ಲಕ್ಷ ರೂಪಾಯಿ ಧೋಖಾ: ಕಂಪನಿ ತೆರೆಯುವ ನೆಪದಲ್ಲಿ ಕೃತ್ಯ

banking fraud
Published on

ಬೆಂಗಳೂರು: ಭಾರತದಲ್ಲಿ ಹೊಸ ಕಂಪನಿ ಸ್ಥಾಪಿಸುವ ನೆಪದಲ್ಲಿ ವ್ಯಕ್ತಿಯೊಬ್ಬರಿಂದ 18 ಲಕ್ಷ ರೂ. ಪಡೆದು ಫೇಸ್​ಬುಕ್ ಗೆಳೆಯ ಮೋಸ ಮಾಡಿದ್ದಾನೆ. ಇಂದಿರಾನಗರದ ಲಕ್ಷ್ಮೀಪುರದ 32 ವರ್ಷದ ವ್ಯಕ್ತಿ ವಂಚನೆಗೆ ಒಳಗಾದವ. ಫೇಸ್​ಬುಕ್ ಗೆಳೆಯ ಜೋಸೆಫ್ ಎಂಬಾತನ ವಿರುದ್ಧ ಎಫ್​ಐಆರ್ ದಾಖಲಿಸಿರುವುದಾಗಿ ಹಲಸೂರು ಪೊಲೀಸರು ತಿಳಿಸಿದ್ದಾರೆ.

2 ವರ್ಷಗಳ ಹಿಂದೆ ಫೇಸ್​ಬುಕ್​ನಲ್ಲಿ ಪರಿಚಯ ವಾಗಿದ್ದ ಆರೋಪಿ ಜೋಸೆಫ್, ತಾನು ಇಂಗ್ಲೆಂಡ್​ನಲ್ಲಿ ನೆಲೆಸಿದ್ದು, ಗಾಶ್​ಪೆಲ್ ಮಿನಿಸ್ಟ್ರೀ ಪ್ರಾಜೆಕ್ಟ್ ನಡೆಸುತ್ತಿದ್ದೇನೆ. ಭಾರತದಲ್ಲಿಯೂ ಶುರು ಮಾಡಬೇಕು. ಅದಕ್ಕಾಗಿ ನಿಮ್ಮ ಸಹಕಾರ ಬೇಕೆಂದು ಹೇಳಿದ್ದ. ಇದಾದ ಕೆಲವು ದಿನಗಳ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್​ಗೆ 17.96 ಲಕ್ಷ ರೂ. ಜಮೆ ಮಾಡಿದ್ದೇನೆ. ಈ ಹಣ ಡ್ರಾ ಮಾಡಿಕೊಳ್ಳಲು ಆರ್​ಬಿಐ ಕಡೆಯಿಂದ ಎಟಿಎಂ ಕಾರ್ಡ್ ಪಡೆಯಬೇಕು. ಅದಕ್ಕಾಗಿ ಮೊದಲು ನೀವು ಆರ್​ಬಿಐಗೆ ಹಣ ಪಾವತಿ ಮಾಡುವಂತೆ ಜೋಸೆಫ್ ಹೇಳಿದ್ದಾನೆ.

ಅದನ್ನು ನಂಬಿದ ದೂರುದಾರ, ವಂಚಕ ಕೊಟ್ಟ ಬ್ಯಾಂಕ್ ಖಾತೆಗೆ 17.96 ಲಕ್ಷ ರೂ. ಜಮೆ ಮಾಡಿದ್ದಾರೆ. ಇದಾದ ಮೇಲೆ ಜೋಸೆಫ್ ಸಂಪರ್ಕವನ್ನು ಕಡಿತ ಮಾಡಿಕೊಂಡಿದ್ದಾನೆ. ಆರೋಪಿ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ವ್ಯಕ್ತಿ ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net