

ನವದೆಹಲಿ: ಚೀನೀಯರು ಆರಂಭಿಸಿರುವ ಫೇಕ್ಸ್ಕೈ ಅಟ್ಯಾಕ್ನ ಟಾರ್ಗೆಟ್ ನೀವು ಕೂಡ ಆಗಿರಬಹುದು- ಹುಷಾರಾಗಿರಿ!. ಏಷ್ಯಾದಲ್ಲೇ ಕಾರ್ಯಾಚರಿಸುತ್ತಿರುವ ಚೀನಿ ಭಾಷೆ ಮಾತನಾಡುವ ರೋಮಿಂಗ್ ಮಾಂಟಿಸ್ ಎಂಬ ಗ್ರೂಪ್ ಫೇಸ್ಸ್ಕೈ ಅಟ್ಯಾಕ್ ನಡೆಸುತ್ತಿರುವ ಬಗ್ಗೆ ಟೆಕ್ ಸಂಶೋಧಕರು ಸಂದೇಹ ವ್ಯಕ್ತಪಡಿಸಿದ್ದಾರೆ.
ಫೇಕ್ಸ್ಕೈ ಅಟ್ಯಾಕ್ ಆದ್ರೆ ಬಳಕೆದಾರರ ಬ್ಯಾಂಕಿಂಗ್ ಮಾಹಿತಿ, ವೈಯಕ್ತಿಕ ಮಾಹಿತಿ ಎಲ್ಲವೂ ಕಳುವಾಗುವುದು ಶತಃಸಿದ್ಧ. ಫೇಸ್ಸ್ಕೈ ಎಂಬ ಆಂಡ್ರಾಯ್ಡ್ ಮಾಲ್ವೇರ್ ಮೂಲಕ ಈ ದಾಳಿ ನಡೆಸಲಾಗುತ್ತದೆ. ಈ ದಾಳಿ ಮೊಟ್ಟ ಮೊದಲ ಬಾರಿಗೆ 2017ರ ಅಕ್ಟೋಬರ್ ತಿಂಗಳಲ್ಲಿ ಪತ್ತೆಯಾಗಿತ್ತು. ಅಂದು ಪ್ರಾಥಮಿಕವಾಗಿ ದಕ್ಷಿಣ ಕೊರಿಯಾ ಮತ್ತು ಜಪಾನ್ ಜನರ ವಿರುದ್ಧ ಈ ದಾಳಿ ನಡೆದಿತ್ತು ಎಂಬ ಅಂಶವನ್ನು ಸೈಬರೀಸನ್ ನೋಕ್ಟರ್ನಸ್ ಎಂಬ ಸಂಸ್ಥೆಯ ಸಂಶೋಧಕರು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಮತ್ತೊಂದು ಮಾರಕ ಕಾಯಿಲೆಯ ಎಚ್ಚರಿಕೆ ರವಾನಿಸಿದೆ ಚೀನಾ!
ಸದ್ಯದ ಪರಿಸ್ಥಿತಿಯಲ್ಲಿ ಈ ದಾಳಿಯ ಗುರಿ ಅಮೆರಿಕ, ಬ್ರಿಟನ್, ಜರ್ಮನಿ, ಫ್ರಾನ್ಸ್, ತೈವಾನ್, ಭಾರತದ ಜನರಾಗಿದ್ದಾರೆ. ಈ ಸಲ ಮಾಲ್ವೇರ್ ಪೋಸ್ಟಲ್ ಸರ್ವೀಸ್ ಆ್ಯಪ್ನ ಸೋಗಿನಲ್ಲಿ ಆಂಡ್ರಾಯ್ಡ್ ಫೋನಿಗೆ ಪ್ರವೇಶ ಪಡೆಯುತ್ತಿದೆ. ವರದಿಗಳ ಪ್ರಕಾರ, ಸ್ಮಿಷಿಂಗ್ ಅಥವಾ ಎಸ್ಎಂಎಸ್ ಪಿಷಿಂಗ್ ಈ ಸಲದ ಅಸ್ತ್ರ. ಫೇಕ್ಸ್ಕೈ ದಾಳಿ ಕೋರರು ಆರಂಭದಲ್ಲಿ ಎಸ್ಎಂಎಸ್ ರವಾನಿಸಿ, ಆ್ಯಪ್ ಡೌನ್ಲೋಡ್ ಮಾಡುವಂತೆ ಸೂಚಿಸುತ್ತಾರೆ.
ನೋಡುವುದಕ್ಕೆ ಇದು ನಿಜವಾದ ಪೋಸ್ಟಲ್ ಸರ್ವೀಸ್ ಆ್ಯಪ್ನಂತೆ ಭಾಸವಾದರೂ, ಒಮ್ಮೆ ಡೌನ್ಲೋಡ್ ಮಾಡಿದ ಬಳಿಕ ಎಸ್ಎಂಎಸ್ ಇಂಟರ್ಸೆಪ್ಟ್ ಮಾಡುವ ಅನುಮತಿ ಕೇಳುತ್ತದೆ. ನಂತರದಲ್ಲಿ ಅನುಮತಿಯಲ್ಲಿ ನಿಮ್ಮ ಫೋನಿನ ಸಂಪೂರ್ಣ ನಿಯಂತ್ರಣ ದಾಳಿಕೋರರ ಕೈಯಲ್ಲಿರುತ್ತದೆ. ಅವರಿಗೆ ಬೇಕಾದ ಬ್ಯಾಂಕಿಂಗ್ ಮಾಹಿತಿ, ಐಎಂಇಐ ನಂಬರ್, ಐಎಂಎಸ್ಐ ನಂಬರ್ ಸೇರಿ ಎಲ್ಲ ಮಾಹಿತಿಗಳನ್ನು ಅವರು ತೆಗೆದುಕೊಂಡು ಅನ್ಯ ಕಾರ್ಯಗಳಿಗೆ ಬಳಸತೊಡಗುತ್ತಾರೆ. (ಏಜೆನ್ಸೀಸ್)