

ನ್ಯಾಮತಿ: ಹೊನ್ನಾಳಿ-ನ್ಯಾಮತಿ ತಾಲೂಕಿನಲ್ಲಿ ಮಳೆಯಿಲ್ಲದೆ ಬೆಳೆಗಳು ಒಣಗುತ್ತಿರುವ ಹಿನ್ನೆಲೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಪಟ್ಟಣದ ಯುವ ಮುಖಂಡರು ನ್ಯಾಮತಿಯಿಂದ ಹೊನ್ನಾಳಿ ಹಿರೇಕಲ್ಮಠದ ಶ್ರೀಗುರು ಚನ್ನಪ್ಪ ಸ್ವಾಮೀಜಿ ಕ್ಷೇತ್ರಕ್ಕೆ ಸೋಮವಾರ ಪಾದಯಾತ್ರೆ ನಡೆಸಿದರು.
ಬೆಳಗಿನ ಜಾವ ಪಟ್ಟಣದ ಬನಶಂಕರಿ ದೇವಿಗೆ ಪೂಜೆ ಸಲ್ಲಿಸಿ ಪಾದಯಾತ್ರೆ ಪ್ರಾರಂಭಿಸಿದ ಮುಖಂಡರು, ಹೊನ್ನಾಳಿ ಚನ್ನಪ್ಪ ಸ್ವಾಮೀಜಿ ಹಿರೇಕಲ್ಮಠದ ಜೀವಂತ ಸಮಾಧಿ ಹೊಂದಿರುವ ವಿವಿಧ ಶ್ರೀಗಳ ಕರ್ತುೃಗದ್ದುಗೆ ಸೇರಿದಂತೆ ವೀರಭದ್ರೇಶ್ವರ ಸ್ವಾಮಿ, ಚೌಡೇಶ್ವರಿ ದೇವಿ ಶಿಲಾಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು.
ಪಾದಯಾತ್ರೆಯಲ್ಲಿ ಮುಖಂಡರಾದ ಹೊಸಮನೆ ಮಲ್ಲಿಕಾರ್ಜುನ ಕುಂಬಾರ್, ಎನ್.ಜೆ. ವಾಗೀಶ್ ನುಚ್ಚಿನ್, ಗುಂಡೂರು ಲೋಕೇಶ್, ರೆಡ್ಡಿ ಉಮೇಶ್, ಚಿಟ್ಟೂರು ಸಂಜು, ಬಸ್ ಉಮೇಶ್, ಸಂತೋಷ್ ಕುಮಾರ್, ದಡ್ಡಿಮನೆ ಬಸಣ್ಣ, ಗಾರೆ ಷಣ್ಮುಖ, ವೀರೇಶ್, ಡಿಶ್ ವೀರಭದ್ರಪ್ಪ ಇತರರು ಇದ್ದರು.