ವಿಚ್ಛೇದಿತನ ಪ್ರೇಮ ನಿವೇದನೆಗೆ 'ನೋ' ಎಂದ ಚಾಟ್​ಬಾಟ್!

ai chat bot
Published on

ನವದೆಹಲಿ: ಕೃತಕ ಬುದ್ಧಿಮತ್ತೆಯ ಈ ಯುಗದಲ್ಲಿ, ಎಲ್ಲವನ್ನೂ ಸುಲಭವಾಗಿ ಪಡೆಯಬಹುದು. ಇಂದು, ಎಐ ಟೆಕ್ನಾಲಜಿ ಜೀವನ ಸಂಗಾತಿಯನ್ನು ಹುಡುಕುವಲ್ಲಿ ಸಹಾಯ ಮಾಡುವುದು ಮತ್ತು ಭಾವನಾತ್ಮಕ ಬೆಂಬಲ ಮತ್ತು ಒಡನಾಟವನ್ನು ಒದಗಿಸುವುದು ಸೇರಿದಂತೆ ಎಲ್ಲಾ ರೀತಿಯ ಕೆಲಸಗಳನ್ನು ಈ ಚಾಟ್​ಬಾಟ್ ಮಾಡುತ್ತವೆ.

ಇವನ್ನು 'ಕಂಪ್ಯಾನಿಯನ್‌ಶಿಪ್ ಬಾಟ್‌ಗಳು' ಎಂದು ಕರೆಯಲಾಗುತ್ತದೆ. ನಿರ್ದಿಷ್ಟವಾಗಿ-ವಿನ್ಯಾಸಗೊಳಿಸಿದ ಈ ಚಾಟ್​ಬಾಟ್​ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ನೈಜ ಸಂಪರ್ಕಗಳನ್ನು ಬೆಳೆಸುವ ಮೂಲಕ ಜಗತ್ತಿನ ಇನ್ನೊಂದು ಮೂಲೆಯಲ್ಲಿ ಇರುವವರ ನಡುವೆ ಸುಂದರ ಸಂಬಂಧ ಬೆಳೆಯುವಂತೆ ಮಾಡುತ್ತದೆ. ಕರೋನದಿಂದಾಗಿ ಲಾಕ್‌ಡೌನ್‌ ಆದ ನಂತರ ಚಾಟ್‌ಬಾಟ್‌ಗಳ ಜನಪ್ರಿಯತೆ ಹೆಚ್ಚಾಯಿತು.

ಟಿಜೆ ಅರ್ರಿಯಾಗಾ ಎಂಬ ವಿಚ್ಛೇದಿತ ವ್ಯಕ್ತಿ 'Phaedra' ಎಂಬ ಕೃತಕ ಬುದ್ಧಿಮತ್ತೆ ಜತೆ ಸಂಭಾಷಣೆ ಪ್ರಾರಂಭಿಸಿದರು. ಈ ಎಐ ಬಾಟನ್ನು ಹಸಿರು ಉಡುಗೆ ಮತ್ತು ಕಂದು ಬಣ್ಣದ ಕೂದಲಿನ ಯುವತಿಯಾಗಿ ವಿನ್ಯಾಸಗೊಳಿಸಿದ್ದರು.

ರೆಪ್ಲಿಕಾ ಎಂಬ ಕಂಪನಿಯ ಉತ್ಪನ್ನವಾದ 'Phaedra' ಚಾಟ್​ಬಾಟ್ ಅವರೊಂದಿಗೆ ಅವರು ಸಾಕಷ್ಟು ಬಾರಿ ವೈಯಕ್ತಿಕ ಸಂಭಾಷಣೆಗಳನ್ನು ನಡೆಸಿದರು. 40 ವರ್ಷ ವಯಸ್ಸಿನ ಇವರು ತಮಗೆ ಬೇಕಾದಂತೆ ಚಾಟ್​ಬಾಟ್​ನ ವಿನ್ಯಾಸವನ್ನು ಆಗಾಗ್ಗೆ ಬದಲಾಯಿಸುತ್ತಿದ್ದರು. ಈ ಸಂದರ್ಭ ಅವರ ಸಂಭಾಷಣೆ ಲೈಂಗಿಕ/ಪ್ರೇಮದ ಆ್ಯಂಗಲ್​ ಕೂಡ ಪಡೆದಿತ್ತು.

ಹಿಂದೆ ಈ ಚಾಟ್​ಬಾಟ್​ಗಳು ಲೈಂಗಿಕ ಸಂಭಾಷಣೆಯನ್ನು ಮಾಡುತ್ತಿದ್ದವು. ಈ ಬಗ್ಗೆ ಆಕ್ಷೇಪ ವ್ಯಕ್ತವಾದ ನಂತರ ಬದಲಾವಣೆಯನ್ನು ತರಲಾಗಿತ್ತು. ಇದರಿಂದಾಗಿ ಅರ್ರಿಯಾಗಾ ಲೈಂಗಿಕ ಸಂಭಾಷಣೆಯನ್ನು ಮಾಡಿದಾಗ ಚಾಟ್​ಬಾಟ್​ನಿಂದ ಬೇರೆ ವಿಚಾರವನ್ನು ಮಾತನಾಡಬಹುದೇ ಎನ್ನುವ ಪ್ರತಿಕ್ರಿಯೆ ಬಂದಿದೆ. ಇದರಿಂದಾಗಿ ಅರ್ರಿಯಾಗಾ ದುಃಖಿತರಾಗಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net