ಕಾಮಿಡಿ ದಂತಕಥೆ ಚಾರ್ಲಿ ಚಾಪ್ಲಿನ್ ಪುತ್ರಿ, ನಟಿ ಜೋಸೆಫೀನ್ ನಿಧನ

actress
Published on

ವಾಷಿಂಗ್ಟನ್ ಡಿಸಿ: ವಿಶ್ವ ಸಿನಿಮಾ ಲೋಕದ ಧ್ರುವತಾರೆ, ಮಹಾನ್ ಮಾನವತಾವಾದಿ ಚಾರ್ಲಿ ಚಾಪ್ಲಿನ್ ಅವರ ಪುತ್ರಿ ಮತ್ತು ನಟಿ ಜೋಸೆಫೀನ್ ಚಾಪ್ಲಿನ್ ಅವರು 74ನೇ ವಯಸ್ಸಿನಲ್ಲಿ ನಿಧನರಾದರು. ಯುಎಸ್ ಮೂಲದ ಮಾಧ್ಯಮದ ಪ್ರಕಾರ, ಕುಟುಂಬದ ಪ್ರಕಟಣೆಯ ಪ್ರಕಾರ ಜುಲೈ 13 ರಂದು ಪ್ಯಾರಿಸ್​​ನಲ್ಲಿ ಜೋಸೆಫೀನ್ ಚಾಪ್ಲಿನ್ ನಿಧನರಾದರು. ಮಾರ್ಚ್ 28, 1949 ರಂದು ಕ್ಯಾಲಿಫೋರ್ನಿಯಾದ ಸಾಂಟಾ ಮೋನಿಕಾದಲ್ಲಿ ಜನಿಸಿದ ಜೋಸೆಫೀನ್ ಚಾಪ್ಲಿನ್, ಚಾರ್ಲಿ ಚಾಪ್ಲಿನ್ ಮತ್ತು ಊನಾ ಓ'ನೀಲ್ ದಂಪತಿಗೆ ಜನಿಸಿದ ಎಂಟು ಮಕ್ಕಳಲ್ಲಿ ಮೂರನೆಯವರಾಗಿದ್ದರು.

1952ರಲ್ಲಿ ತೆರೆಕಂಡ ತಮ್ಮ ತಂದೆಯ 'ಲೈಮ್‌ಲೈಟ್‌'ನಿಂದ ಜೋಸೆಫೀನ್ ವೃತ್ತಿಜೀವನವನ್ನು ಪ್ರಾರಂಭಿಸಿದ್ದು, ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಜೋಸೆಫೀನ್ ಅವರಿಗೆ ಚಾರ್ಲಿ, ಆರ್ಥರ್ ಮತ್ತು ಜೂಲಿಯನ್ ರೋನೆಟ್ ಎಂಬ ಮೂವರು ಗಂಡು ಮಕ್ಕಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net