ಈ ಭಾರತೀಯ ಸಿನಿಮಾವನ್ನು ತಮ್ಮ ಭಾಷೆಯಲ್ಲಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸುತ್ತಿರುವ ಜಪಾನಿಗರು!

bawal
Published on

ಬೆಂಗಳೂರು: ಭಾರತೀಯ ಚಿತ್ರವೊಂದನ್ನು ಜಪಾನ್‌ನಲ್ಲಿ ಬಿಡುಗಡೆ ಮಾಡಬೇಕೆಂದು ಜಪಾನ್ ಜನರು ಒತ್ತಾಯಿಸುತ್ತಿದ್ದಾರೆಯೇ?. ಹೌದು. ಆ ಚಿತ್ರಕಥೆ ಇರುವುದೇ ಹಾಗೆ. ನಿತೀಶ್ ತಿವಾರಿ ನಿರ್ದೇಶನದ ವರುಣ್ ಧವನ್-ಜಾನ್ವಿ ಕಪೂರ್ ಅಭಿನಯದ 'ಬಾವಲ್' ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಇದನ್ನು ಎರಡನೇ ಮಹಾಯುದ್ಧದ ಹಿನ್ನೆಲೆಯಲ್ಲಿ ನಿರ್ಮಿಸಲಾಗಿದೆ. ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಗಳಿವೆ. ನೇರವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದ್ದರೂ ನಿರ್ಮಾಪಕರು ಆ ಅವಕಾಶವನ್ನು ಕೈಗೆತ್ತಿಕೊಳ್ಳಲಿಲ್ಲ.

ಆದರೆ ಜಪಾನಿಗರು ತಮ್ಮ ದೇಶದಲ್ಲೂ ಈ ಸಿನಿಮಾವನ್ನು ಅನುವಾದದ ರೂಪದಲ್ಲಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಎರಡನೇ ಮಹಾಯುದ್ಧದ ಹಿನ್ನೆಲೆಯುಳ್ಳ ಈ ಚಿತ್ರವನ್ನು ನೋಡಲು ಜಪಾನಿಗರು ಬಯಸುತ್ತಿದ್ದಾರೆ. ಜನರು ತಮ್ಮ ದೇಶದ ಇತಿಹಾಸವನ್ನು ತಿಳಿಯಲು ಬಯಸುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

"ಜಪಾನ್ ಭಾಷೆಯಲ್ಲಿ ಅನುವಾದಿಸಿದರೆ ನಮ್ಮ ಇತಿಹಾಸ ತಿಳಿಯುತ್ತದೆ'' ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ನಿರ್ಮಾಪಕರು ಚಿತ್ರವನ್ನು ಜಪಾನ್‌ನಲ್ಲಿ ಬಿಡುಗಡೆ ಮಾಡುತ್ತಾರೆಯೇ ಕಾದು ನೋಡಬೇಕು. ವಾಸ್ತವವಾಗಿ ಈ ಚಿತ್ರ ಭಾರತದ ಥಿಯೇಟರ್‌ಗಳಲ್ಲಿ ಬಿಡುಗಡೆಯಾದರೆ ಉತ್ತಮ ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದಾರೆ. ಆದರೆ ನಿರ್ದೇಶಕ-ನಿರ್ಮಾಪಕರು ಒಟಿಟಿಯಲ್ಲಿ ಬಿಡುಗಡೆ ಮಾಡಲು ಯೋಜಿಸಿದ್ದಾರೆ. ಇದಕ್ಕೆ ಕಾರಣ ಏನು ಎಂಬುದು ಬಿಡುಗಡೆ ನಂತರ ತಿಳಿಯಲಿದೆ.

ಭಾರತೀಯ ಚಿತ್ರಗಳಾದ ‘ಬಾಹುಬಲಿ’, ‘ಆರ್‌ಆರ್‌ಆರ್‌ಆರ್‌’, ‘ಕೆಜಿಎಫ್‌’ ಜಪಾನ್‌ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಗಳಿಸಿರುವುದು ಗೊತ್ತೇ ಇದೆ. ಆ ನಂತರ ಜಪಾನ್ ನಲ್ಲಿ ಭಾರತೀಯ ಚಿತ್ರಗಳ ಕ್ರೇಜ್ ದುಪ್ಪಟ್ಟಾಯಿತು. ಅದಕ್ಕೂ ಮುನ್ನ ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಿನಿಮಾಗಳ ಪ್ರಭಾವ ಹೆಚ್ಚಾಗಿತ್ತು. ಬಾಲಿವುಡ್ ಸಿನಿಮಾಗಳ ಪ್ರಭಾವ ಕಡಿಮೆ. ಆದರೆ ರಾಜಮೌಳಿಯಿಂದಾಗಿ ತೆಲುಗು ಸಿನಿಮಾಗಳಿಗೆ ಅಲ್ಲಿ ಬೇಡಿಕೆ ಹೆಚ್ಚಿದೆ. ತೆಲುಗು ಪ್ಯಾನ್ ಇಂಡಿಯಾ ಕಂಟೆಂಟ್ ಕೂಡ ಮಿಂಚಿನ ವೇಗದಲ್ಲಿ ಜಪಾನ್ ತಲುಪುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net