ನನ್ನ ಬಳೆ ಒಡೆದರು! ಇದಕ್ಕೆಲ್ಲ ಮಮತಾ ಬ್ಯಾನರ್ಜಿ ಪೊಲೀಸರೇ ಕಾರಣ; ಮೃತ ಟ್ರೈನಿ ವೈದ್ಯೆ ತಾಯಿ ಆರೋಪ | RG Kar Protest

ವಿಜಯವಾಣಿ (43)
Published on

RG Kar Protest: ಕಳೆದ ವರ್ಷ ಆಗಸ್ಟ್​ 09ರಂದು ಇಡೀ ಜಗತ್ತನ್ನೇ ಬೆಚ್ಚಿಬೇಳಿಸಿದ ಕೋಲ್ಕತದ ಆರ್​ಜಿ ಕರ್​ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಟ್ರೈನಿ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ ಇಂದಿಗೂ ಬಗೆಹರಿದಿಲ್ಲ ಎಂಬುದಕ್ಕೆ ಮೃತ ವೈದ್ಯೆ ಪೋಷಕರ ಪ್ರತಿಭಟನೆಯೇ ಜ್ವಲಂತ ಸಾಕ್ಷಿ.

ಟ್ರೈನಿ ವೈದ್ಯೆಯೇ ಅತ್ಯಾಚಾರ-ಕೊಲೆ ನಡೆದು ಇಂದಿಗೆ ಒಂದು ವರ್ಷ ಕಳೆದಿದೆ. ತಮಗೆ ಇನ್ನೂ ನ್ಯಾಯ ಸಿಕ್ಕಿಲ್ಲ ಎಂದಿರುವ ಪೋಷಕರು, ಸಿಬಿಐ ಅಧಿಕಾರಿಗಳು ಮಗಳ ಸಾವಿಗೆ ನ್ಯಾಯ ಕೊಡಿಸುವಲ್ಲಿ ಸೋತಿದ್ದಾರೆ ಎಂದು ತೀವ್ರ ಕಿಡಿಕಾರಿದ್ದಾರೆ. ಮಗಳು ಸಾವಿಗೀಡಾಗಿ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ವೈದ್ಯೆ ಪೋಷಕರು, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮಮತಾ ಬ್ಯಾನರ್ಜಿ ಅವರ ಕಚೇರಿ, ರಾಜ್ಯ ಸಚಿವಾಲಯದ ಮುಂದೆ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿದ್ದ ವೈದ್ಯೆಯ ಪೋಷಕರು ಮತ್ತು ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಈ ವೇಳೆ ಗಾಯಗೊಂಡ ವೈದ್ಯೆ ತಾಯಿ, "ಮಮತಾ ಬ್ಯಾನರ್ಜಿ ಖಾಕಿ ಪಡೆ ನನ್ನ ತಲೆಗೆ ಪೆಟ್ಟು ಮಾಡಿದ್ದಾರೆ. ನನ್ನ ಕೈಯಲ್ಲಿದ್ದ ಸಾಂಪ್ರದಾಯಿಕ ಬಳೆಗಳನ್ನು ಒಡೆದರು" ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

"ಪೊಲೀಸರೇಕೆ ನಮ್ಮನ್ನು ತಡೆಯುತ್ತಿದ್ದಾರೆ? ನಾವು ಸಚಿವಾಲಯಕ್ಕೆ ಹೋಗಿ, ನೇರವಾಗಿ ನಮ್ಮ ಮಗಳಿಗೆ ನ್ಯಾಯ ಕೊಡಿಸಿ ಎಂದು ಕೇಳಲು ಮುಂದಾಗಿದ್ದೀವಿ. ನಾವು ಕೋರ್ಟ್​ನ ಅನುಮತಿಯ ಮೇರೆಗೆ ಈ ರ್ಯಾಲಿ ಕೈಗೊಂಡಿದ್ದೇವೆ. ಇದನ್ನೂ ಮೀರಿ ಪೊಲೀಸರು ನಮ್ಮನ್ನು ತಡೆಯುವ ಪ್ರಯತ್ನದಲ್ಲಿ ತೊಡಗಿದ್ದಾರೆ" ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net