

Raksha Bandhan: ರಕ್ಷಾ ಬಂಧನದ ದಿನದಂದು ಬಾಲಘಾಟ್ನ ಸಂಘಮಿತ್ರ ಖೋಬ್ರಗಡೆ ತನ್ನ ಸಹೋದರನಾದ ಪ್ರಸನಜೀತ್ ರಂಗರಿಗೆ ರಾಕಿ ಕಟ್ಟಲು ಹಾತೊರೆಯುತ್ತಿದ್ದು, ಇದಕ್ಕೆ ಸರ್ಕಾರ ಅನುಮತಿ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನಕ್ಕೆ ಅಂಚೆ ಮತ್ತು ಕೊರಿಯರ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿರುವುದರಿಂದ ಸಹೋದರನಿಗೆ ಕಳುಹಿಸಿದ ಪತ್ರವನ್ನು ಅಂಚೆ ಕಚೇರಿಯವರು ಸಂಘಮಿತ್ರಳಿಗೆ ವಾಪಸ್ಸು ನೀಡಿದ್ದಾರೆ.
ಇನ್ನು ಸಹೋದರಿ ಸಂಘಮಿತ್ರ ಖೋಬ್ರಗಡೆ ಪತ್ರವೊಂದರಲ್ಲಿ ಸಹೋದರ, ರಕ್ಷಾ ಬಂಧನದಂದು ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾನು ನಿನಗೆ ರಾಖಿ ಕಳುಹಿಸಲು ಬಯಸುತ್ತೇನೆ, ಆದರೆ ನೀನು ಭಾರತದಿಂದ ತುಂಬಾ ದೂರದಲ್ಲಿದ್ದಿಯಾ. ಭಾರತ ಸರ್ಕಾರವು ನಾನು ಪ್ರೀತಿಯಿಂದ ಕಳುಹಿಸಿದ ರಾಖಿಯನ್ನು ಸ್ವೀಕರಿಸಿ ಪಾಕಿಸ್ತಾನದ ಲಾಹೋರ್ನಲ್ಲಿರುವ ಕೋಟ್ ಲಖ್ಪತ್ ಜೈಲಿಗೆ ಕಳುಹಿಸುತ್ತದೆ ಎಂದು ನಾನು ಭಾವಿಸುತ್ತೇನೆ.
ಇದರಿಂದ ಒಬ್ಬ ಸಹೋದರಿ ತನ್ನ ಸಹೋದರನಿಗೆ ರಾಖಿ ಕಟ್ಟುವ ಬಯಕೆಯನ್ನು ಈಡೇರಿಸಬಹುದು. ಪ್ರತಿಯೊಬ್ಬ ಸಹೋದರಿಯೂ ತನ್ನ ಸಹೋದರನಿಗೆ ರಾಖಿ ಕಟ್ಟುತ್ತಾಳೆ, ಆದರೆ ನಾನು ಹಾಗೆ ಮಾಡಲು ಸಾಧ್ಯವಾಗದ ದುರದೃಷ್ಟಕರ ಸಹೋದರಿ. ತಾಯಿ ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾಳೆ. ನಿಮಗಾಗಿ ಕಾಯುತ್ತಾಳೆ. ನಿನ್ನ ಸೊಸೆಯಂದಿರು ಸಹ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಾರೆ ಮತ್ತು ನಿನ್ನನ್ನು ನೋಡಲು ಬಯಸುತ್ತಿದ್ದಾರೆ ಎಂದು ಬರೆದಿದ್ದರು.
ಫಾರ್ಮಸಿ ವಿದ್ಯಾರ್ಥಿಯಾಗಿದ್ದ ಪ್ರಸನ್ನಜಿತ್ ಕೆಲವು ವರ್ಷಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದರು. 2021 ರವರೆಗೆ ಅವರು ಸತ್ತಿದ್ದಾರೆಂದು ಕುಟುಂಬ ನಂಬಿತ್ತು, ಕೋಟ್ ಲಖ್ಪತ್ನ ಮಾಜಿ ಭಾರತೀಯ ಕೈದಿಯೊಬ್ಬರು ಅವರು ಜೀವಂತವಾಗಿದ್ದಾರೆ ಎಂದು ತಿಳಿಸಿದ್ದರು. ಪಾಕಿಸ್ತಾನವು ಅವರನ್ನು 2019 ರ ಅಕ್ಟೋಬರ್ನಲ್ಲಿ ಬಟಾಪುರದಿಂದ ವಶಕ್ಕೆ ತೆಗೆದುಕೊಂಡಿದೆ ಎಂದು ದಾಖಲೆಗಳು ತೋರಿಸುತ್ತವೆ. ಅವರನ್ನು ಅಲ್ಲಿ ಬೇರೆ ಹೆಸರಿನಲ್ಲಿ ಪಟ್ಟಿ ಮಾಡಲಾಗಿದೆ ಆದರೆ ಅವರ ನಿಜವಾದ ಗುರುತು ಮತ್ತು ಕುಟುಂಬದ ವಿವರಗಳಿಂದ ತಿಳಿದುಬಂದಿದೆ. ( ಏಜೆನ್ಸೀಸ್)