

ರಾಣೆಬೆನ್ನೂರ: ವ್ಯಕ್ತಿಗೆ ಜಯವಲ್ಲ, ಜಾತಿಗೆ ಜಯವಲ್ಲ, ಧರ್ಮಕ್ಕೆ ಜಯವಲ್ಲ ಬದಲಾಗಿ ಸಮಗ್ರ ಮಾನವ ಧರ್ಮಕ್ಕೆ ಜಯವಾಗಲಿ ಎನ್ನುವ ಪರಂಪರೆಯನ್ನು ನೀಡಿರುವ ಲಿಂ. ಚಂದ್ರಶೇಖರ ಒಡೆಯರ ಶಿವಾಚಾರ್ಯ ಸ್ವಾಮೀಜಿಯವರ ಧರ್ಮದ ಹಾದಿ ಎಂದಿಗೂ ಪ್ರಸ್ತುತವಾಗಿದೆ ಹೊನ್ನಾಳಿ ಹಿರೇಕಲ್ಮಠದ ಒಡೆಯರ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ನಗರದ ಚನ್ನೇಶ್ವರ ಮಠದಲ್ಲಿ ಚೆನ್ನಮಲ್ಲಿಕಾರ್ಜುನ ಸ್ವಾಮಿ ಸಂಸತಿ ಪ್ರಸಾರ ಪರಿಷತ್ ವತಿಯಿಂದ ಗುರುವಾರ ಸಂಜೆ ಏರ್ಪಡಿಸಿದ್ದ ಲಿಂ. ಒಡೆಯರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಯವರ ಸ್ಮರಣೋತ್ಸವ, ಅನಂತನ ಹುಣ್ಣಿಮೆ ಜ್ಞಾನವಾಹಿನಿ ಮಾಸಿಕ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಉಪನ್ಯಾಸಕ ಎಚ್.ಎ. ಭಿಕ್ಷಾವತಿರ್ಮಠ ಸಮನ್ವಯಾಚಾರ್ಯ ವಿಷಯ ಕುರಿತು ಉಪನ್ಯಾಸ ನೀಡಿದರು. ನಿವೃತ್ತ ಶಿಕ್ಷಕ ಪಾಲಾಕ್ಷಯ್ಯ ನೆಗಳೂರಮಠ, ನೆಹರು ಮಾರ್ಕೆಟ್ ವರ್ತಕರ ಸಂಘದ ಅಧ್ಯಕ್ಷ ಬಸವರಾಜಪ್ಪ ಪಟ್ಟಣಶೆಟ್ಟಿ, ಉಪಾಧ್ಯಕ್ಷ ಹಾಲಪ್ಪ ಮುದ್ದಿಯವರ, ಗೌರವ ಕಾರ್ಯದಶಿರ್ ಪುಟ್ಟನಗೌಡ ತೆಂಬದ ಹಾಗೂ ನೂತನ ನಿರ್ದೇಶಕರನ್ನು ಸನ್ಮಾನಿಸಲಾಯಿತು.
ಕಲಾವಿದರಾದ ಗುಡ್ಡಪ್ಪ ಹಿಂದಲಮನಿ, ಮೌನೇಶ ತ್ರಾಸದ, ರಜನಿ ಕರಿಗಾರ, ಸೋಮನಾಥ ಹಿರೇಮಠ ಸಂಗೀತ ಪ್ರಸ್ತುತ ಪಡಿಸಿದರು.
ಮಠದ ಕಾರ್ಯದಶಿರ್ ಅಮೃತಗೌಡ ಹಿರೇಮಠ, ಜಗದೀಶ ಮಳಿಮಠ, ಕಸ್ತೂರೆಮ್ಮ ಪಾಟೀಲ, ವಿ.ಎಂ. ಕರ್ಜಗಿ, ಜ್ಯೋತಿ ಬಣ್ಣದ, ಚನ್ನವಿರಗೌಡ ಪಾಟೀಲ, ರಾಚಯ್ಯ ಶಾಸ್ತ್ರಿಗಳು, ಗೌರಿಶಂಕರಸ್ವಾಮಿ ನೆಗಳೂರುಮಠ, ಎಂ.ಕೆ. ಹಾಲಸಿದ್ದಯ್ಯಾಶಾಸ್ತ್ರಿ, ಸುನಂದಮ್ಮ ತಿಳುವಳ್ಳಿ, ಗಾಯತ್ರಿ ಕುರುವತ್ತಿ, ಭಾಗ್ಯಶ್ರೀ ಗುಂಡಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.