ನಿಖಿಲ್‌ಗೆ ಬಿಗ್ ಶಾಕ್‌! ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಭಾರೀ ಮುನ್ನಡೆ.. Channapatna Bye Election ಕ್ಷಣ, ಕ್ಷಣಕ್ಕೂ ಟೆನ್ಷನ್

Nikhil Kumaraswamy
Published on

Channapatna Bye Election : ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಯ ಮತ ಎಣಿಕೆ ಕ್ಷಣ, ಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಭಾರೀ ಮುನ್ನಡೆ ಸಾಧಿಸುತ್ತಿದ್ದು,ನಿಖಿಲ್ ಕುಮಾರಸ್ವಾಮಿ ಹಿನ್ನಡೆ ಅನುಭವಿಸುತ್ತಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಅವರು ಆಮೇಲೆ ಸತತ 10ನೇ ಸುತ್ತಿನಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗಿಂತ ಮುನ್ನಡೆ ಸಾಧಿಸುತ್ತಿದ್ದಾರೆ.

10ನೇ ಸುತ್ತಿನ ಮತ ಏಣಿಕೆಯಲ್ಲಿ NDA – ನಿಖಿಲ್ ಕುಮಾರಸ್ವಾಮಿ – 37,286 –  ಹಿನ್ನಡೆ

ಕಾಂಗ್ರೆಸ್‌ – ಸಿ.ಪಿ. ಯೋಗೇಶ್ವರ್ – 55.135 –  ಮುನ್ನಡೆ 19,799 ಮತಗಳಿಂದ ಮುನ್ನಡೆ  ಸಾಧಿಸಿದ್ದಾರೆ.

ಆರಂಭದಿಂದಲೂ ಹಾವು-ಏಣಿ ಫಲಿತಾಂಶ ಹೊರ ಬೀಳುತ್ತಿದ್ದು, ನಿಖಿಲ್ ಕುಮಾರಸ್ವಾಮಿ ಹಾಗೂ ಸಿ.ಪಿ ಯೋಗೇಶ್ವರ್‌ ಅವರ ರಾಜಕೀಯ ಭವಿಷ್ಯ ರಣ ರೋಚಕವಾಗಿದೆ.

ಬೆಂಗಳೂರಿನ ಪದ್ಮನಾಭನಗರದ ನಿವಾಸದಲ್ಲಿರುವ ಹೆಚ್‌ಡಿಡಿ ಫೋನ್‌ನಲ್ಲಿ ಚುನಾವಣಾ ಫಲಿತಾಂಶದ ಬಗ್ಗೆ ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net