ಶಿಕ್ಷಣ ಜೀವನ ರೂಪಿಸುವ ಸಾಧನ

Channagiri, Pratibha, Karanji,
Published on

ಚನ್ನಗಿರಿ: ಶಿಕ್ಷಣ ಜೀವನ ರೂಪಿಸುವ ಸಾಧನವಾಗಿದೆ ಎಂದು ಕ್ಷೇತ್ರ ಸಮಾನ್ವಯಾಧಿಕಾರಿ ಡಾ.ಎಸ್.ಶಂಕರಪ್ಪ ತಿಳಿಸಿದರು.

ಪಟ್ಟಣದ ಜ್ಞಾನ ಜ್ಯೋತಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2023-24ನೇ ಸಾಲಿನ ಚನ್ನಗಿರಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಮನೆ, ಶಾಲೆಗಳಿಗೆ ಹೆಸರು ತರುವ ಒತ್ತಡ ಮಕ್ಕಳ ಮೇಲೆ ಹೇರಲಾಗುತ್ತಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಂಕಗಳ ಅವಶ್ಯಕತೆ ಇದೆ. ಆದರೆ, ಅದೊಂದೇ ಮುಖ್ಯವಲ್ಲ. ಪಠ್ಯದ ಜತೆ ಪಠ್ಯೇತರದಲ್ಲೂ ಅವರನ್ನು ತೊಡಗಿಸಬೇಕು. ಬದುಕು ರೂಪಿಸಿಕೊಳ್ಳಬಲ್ಲ ಜ್ಞಾನ ನೀಡುವ ಅನಿವಾರ್ಯ ಇದೆ ಎಂದು ಅಭಿಪ್ರಾಯಪಟ್ಟರು.

ಪ್ರತಿ ಮಕ್ಕಳಲ್ಲೂ ಒಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಉತ್ತೇಜಿಸಿದರೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುವಂಥ ಶಕ್ತಿ ಹೊರಹೊಮ್ಮುತ್ತದೆ. ಶಿಕ್ಷಕರು, ಪಾಲಕರು ಗುರುತಿಸಿ ಹೊರತರುವಂಥ ಕೆಲಸ ಮಾಡಬೇಕಿದೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಯೋಗೇಶ್, ಮುಖ್ಯಶಿಕ್ಷಕ ರಂಗನಾಥ್, ಜ್ಞಾನ ಜ್ಯೋತಿ ಪ್ರಾಥಮಿಕ ಶಾಲಾ ಕಾರ್ಯದರ್ಶಿ ರವಿಕುಮಾರ್, ಗುಡದಪ್ಪ, ಶೋಭಾ, ರಾಜಪ್ಪ, ಸಿಆರ್‌ಪಿ ನಾಗರಾಜ್, ಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net