ಪಿಎಫ್ ವಿವರ ಆನ್​ಲೈನ್​ನಲ್ಲೇ ಬದಲಾವಣೆ

ವಿಜಯವಾಣಿ (5)
Published on

ನವದೆಹಲಿ: ಹೆಸರು, ಜನ್ಮದಿನಾಂಕ, ತಂದೆ-ತಾಯಿ- ಪತ್ನಿ ಹೆಸರು, ರಾಷ್ಟ್ರೀಯತೆ ಮುಂತಾದ ವೈಯಕ್ತಿಕ ವಿವರಗಳನ್ನು ಇನ್ನು ಮುಂದೆ ಉದ್ಯೋಗದಾತರ ಪರಿಶೀಲನೆ ಅಥವಾ ಒಪ್ಪಿಗೆ ಇಲ್ಲದೆ ಆನ್​ಲೈನ್​ನಲ್ಲಿ ಬದಲಾವಣೆ ಮಾಡಲು ಕಾರ್ವಿುಕರ ಭವಿಷ್ಯ ನಿಧಿ (ಇಪಿಎಫ್) ಸಂಸ್ಥೆ ತನ್ನ 7.6 ಕೋಟಿ ಸದಸ್ಯರಿಗೆ ಶನಿವಾರದಿಂದ ಅವಕಾಶ ಕಲ್ಪಿಸಿದೆ.

ಇದಲ್ಲದೆ ಕೆಲಸ ಬದಲಾಯಿಸಿದಾಗ, ಇಪಿಎಫ್ ವರ್ಗಾವಣೆಯನ್ನು ಕೂಡ ಉದ್ಯೋಗದಾತ ಸಂಸ್ಥೆಯ ಒಪ್ಪಿಗೆ ಇಲ್ಲದೆ, ಆಧಾರ್ ಒಟಿಪಿ ಬಳಸಿಕೊಂಡು ಆನ್​ಲೈನ್​ನಲ್ಲಿ ಮಾಡಬಹುದು. ಈ ಎರಡು ಹೊಸ ಸೇವೆಗಳಿಗೆ ಕೇಂದ್ರ ಕಾರ್ವಿುಕ ಸಚಿವ ಮನ್ಸುಖ್ ಮಾಂಡವಿಯಾ ಚಾಲನೆ ನೀಡಿದರು. ಶೇ. 27ರಷ್ಟು ದೂರುಗಳು ಸದಸ್ಯರ ಪ್ರೊಫೈಲ್, ಕೆವೈಸಿಗೆ ಸಂಬಂಧಿಸಿದಂತೆಯೇ ಇರುತ್ತವೆ.

ಇನ್ನು ಮೇಲೆ ಅವು ಕಡಿಮೆಯಾಗಲಿವೆ. 2017ರ ಅ. 1ರ ನಂತರ ಯುಎಎನ್ ಪಡೆದವರಿಗೆ ಈ ಸೌಲಭ್ಯ ಲಭ್ಯವಾಗಲಿದೆ. ಅದಕ್ಕಿಂತ ಮುಂಚೆ ಯುಎಎನ್ ಪಡೆದವರಿಗೆ ಉದ್ಯೋಗದಾತ ಸಂಸ್ಥೆಯವರೇ ವಿವರಗಳನ್ನು ಇಪಿಎಫ್​ಒ ಅನುಮತಿ ಇಲ್ಲದೆ ಬದಲಾವಣೆ ಮಾಡಬಹುದಾಗಿದೆ. ಆಧಾರ್- ಯುಎಎನ್ ಲಿಂಕ್ ಆಗಿರದ ಸದಸ್ಯರು ದಾಖಲೆಗಳನ್ನು ಭೌತಿಕವಾಗಿ ಉದ್ಯೋಗದಾತ ಸಂಸ್ಥೆಗೆ ಕೊಟ್ಟು, ಪರಿಶೀಲನೆ ಬಳಿಕ ಇಪಿಎಫ್​ಒಗೆ ಕಳಿಸಬಹುದು ಎಂದು ಸಚಿವರು ವಿವರಿಸಿದರು.

ಹೊಸ ಆದಾಯ ತೆರಿಗೆ ವಿಧೇಯಕ

ಸಂಸತ್ತಿನ ಮುಂಬ ರುವ ಬಜೆಟ್ ಅಧಿವೇಶನದಲ್ಲಿ ಸರ್ಕಾರ ಹೊಸ ಆದಾಯ ತೆರಿಗೆ ಮಸೂದೆಯನ್ನು ಮಂಡಿಸುವ ಸಾಧ್ಯತೆ ಇದೆ. ಈಗಿರುವ ಆದಾಯ ತೆರಿಗೆ ಕಾಯ್ದೆ ಯನ್ನು ಸಮಗ್ರ ಹಾಗೂ ಸರಳಗೊಳಿಸುವುದು, ಶೇ. 60ರಷ್ಟು ಪುಟಗಳನ್ನು ಕಡಿಮೆ ಮಾಡುವುದು ಈ ಹೊಸ ವಿಧೇಯಕದ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net