ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಕೂಗು

DK Shivakumar
Published on

ಬೆಂಗಳೂರು: ಸರ್ಕಾರದೊಳಗಿನ ಬಂಡಾಯದ ದನಿಯಾಗಿ ಕಾಣಿಸುತ್ತಿರುವ ಸಹಕಾರ ಸಚಿವ ರಾಜಣ್ಣ ಮತ್ತಷ್ಟು ಡಿಸಿಎಂ ಹುದ್ದೆ ಸೃಷ್ಟಿಸಬೇಕೆಂದು ಚರ್ಚೆ ಹುಟ್ಟುಹಾಕಿದ ಬಳಿಕ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತೂ ಸಹ ಮಾತನಾಡಿದ್ದಾರೆ.
‘ಸಿಎಂ, ಡಿಸಿಎಂ ಆಯ್ಕೆ ಸಮಯದಲ್ಲಿ ಹೈಕಮಾಂಡ್ ಏನು ಹೇಳಿತ್ತು...? ಸಿಎಂ ಸಿದ್ದರಾಮಯ್ಯ ಈಸ್ ಚೀಫ್ ಮಿನಿಸ್ಟರ್, ಡಿ.ಕೆ.ಶಿವಕುಮಾರ್ ಈಸ್ ಡೆಪ್ಯೂಟಿ ಸಿಎಂ ಎಂದಿತ್ತು ಮತ್ತು ಮೂರನೆಯದ್ದು ಕೆಪಿಸಿಸಿ ಪ್ರೆಸಿಡೆಂಟ್ ವಿಲ್ ಕಂಟಿನ್ಯೂ ಪಾರ್ಲಿಮೆಂಟ್ ಎಲೆಕ್ಷನ್ ಎಂದು ಹೇಳಿದ್ದರು. ಅದನ್ನ ಈಗ ನೆನಪಿಸಿಕೊಳ್ಳೋಕೆ ಒತ್ತಾಯ ಮಾಡುತ್ತೇನೆ’ ಎಂದು ರಾಜಣ್ಣ ಹೇಳಿದ್ದಾರೆ.
ಲಿಂಗಾಯತ ನಾಯಕರು ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೇಳುವುದರಲ್ಲಿ ತಪ್ಪೇನಿಲ್ಲ ಎಂದೂ ಹೇಳುವ ಮೂಲಕ ಚರ್ಚೆಯನ್ನು ಬೇರೆ ದಿಕ್ಕಿನತ್ತ ಕೊಂಡೊಯ್ಯುವ ಪ್ರಯತ್ನ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net