ಜೆಡಿಎಸ್​ ಪಟ್ಟಿಯಲ್ಲಿ ಮಹತ್ವದ ಬದಲಾವಣೆ; 12 ಕ್ಷೇತ್ರಗಳಲ್ಲಿ ಹೊಸದಾಗಿ ಅಭ್ಯರ್ಥಿಗಳ ಘೋಷಣೆ!

JDS
Published on

ಬೆಂಗಳೂರು: ಪ್ರಸಕ್ತ ಚುನಾವಣೆ ಹಿನ್ನೆಲೆಯಲ್ಲಿ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿರುವ ಜೆಡಿಎಸ್, ಈಗಾಗಲೇ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದೆ. ಜೊತೆಗೆ ಇನ್ನೊಂದು ಪಟ್ಟಿಯನ್ನೂ ಬಿಡುಗಡೆ ಮಾಡಿದೆ.

ಅಂದರೆ ಈಗಾಗಲೇ ಟಿಕೆಟ್ ಘೋಷಣೆ ಮಾಡಿರುವ 12 ಕ್ಷೇತ್ರಗಳ ಅಭ್ಯರ್ಥಿಗಳನ್ನು ಬದಲಿಸಿ ಆ ಕ್ಷೇತ್ರಗಳಿಗೆ ಹೊಸ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಮಾತ್ರವಲ್ಲ, ಇನ್ನೊಂದು ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಜೆಡಿಎಸ್​ನ ಬಾಹ್ಯ ಬೆಂಬಲ ನೀಡುತ್ತಿರುವ ಏಳು ಅಭ್ಯರ್ಥಿಗಳ ಹೆಸರನ್ನು ಪ್ರಕಟ ಮಾಡಿದೆ.

ಜೆಡಿಎಸ್‌ 12 ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾವಣೆ

ಬಸವನಬಾಗವಾಡಿ: ಸೋಮನಗೌಡ ಪಾಟೀಲ್ (ಪರಮಾನಂದ ಬಸಪ್ಪ)

ಬಸವಕಲ್ಯಾಣ: ಸಂಜಯ್ ವಾಡೇಕರ್ (ಸೈಯದ್ ಯಶಬ್)

ಬೀದರ್: ಸೂರ್ಯಕಾಂತ ನಾಗರಮಾರಪಲ್ಲಿ (ರಮೇಶ ಪಾಟೀಲ್)ಕುಷ್ಟಗಿ: ಶರಣಪ್ಪ ಕುಂಬಾರ (ತುಕರಾಂ ಸುರ್ವೆ)

ಹಗರಿಬೊಮ್ಮನಹಳ್ಳಿ: ನೇಮಿರಾಜ ನಾಯ್ಕ (ಪರಮೇಶ್ವರಪ್ಪ)

ಬಳ್ಳಾರಿ ನಗರ: ಅನಿಲ್‌ ಲಾಡ್ (ಅಲ್ಲಾಭಕ್ಷ ಮುನ್ನಾ)

ಚನ್ನಗಿರಿ: ತೇಜಸ್ವಿ ಪಟೇಲ್ (ಎಂ. ಯೋಗೇಶ್)

ಮೂಡಿಗೆರೆ (ಎಸ್.ಸಿ): ಎಂ.ಪಿ. ಕುಮಾರಸ್ವಾಮಿ (ಬಿ.ಬಿ.ನಿಂಗಯ್ಯ)

ರಾಜಾಜಿನಗರ: ಡಾ.ಅಂಜನಪ್ಪ (ಗಂಗಾಧರ ಮೂರ್ತಿ)

ಬೆಂಗಳೂರು ದಕ್ಷಿಣ: ರಾಜಗೋಪಾಲರೆಡ್ಡಿ (ಆರ್.ಪ್ರಭಾಕರ್ ರೆಡ್ಡಿ

ಮಂಡ್ಯ: ಬಿ.ಆರ್. ರಾಮಚಂದ್ರ (ಎಂ. ಶ್ರೀನಿವಾಸ್ )

ವರುಣ: ಡಾ: ಭಾರತಿ ಶಂಕರ್‌ (ಅಭಿಷೇಕ್ )

ಜೆಡಿಎಸ್​ ಬಾಹ್ಯ ಬೆಂಬಲ ಸೂಚಿಸಿರುವ ಅಭ್ಯರ್ಥಿಗಳು

ನಂಜನಗೂಡು: ದರ್ಶನ್ ಧ್ರುವನಾರಾಯಣ್​

ಗುಲ್ಬರ್ಗ ಗ್ರಾಮಾಂತರ: ಸಿಪಿಐಎಂ ಅಭ್ಯರ್ಥಿ

ಬಾಗೇಪಲ್ಲಿ: ಸಿಪಿಐಎಂ ಅಭ್ಯರ್ಥಿ

ಕೆ.ಆರ್.ಪುರ: ಸಿಪಿಐಎಂ ಅಭ್ಯರ್ಥಿ

ಸಿ.ವಿ.ರಾಮನ್​ನಗರ: ಆರ್​ಪಿಐ ಅಭ್ಯರ್ಥಿ

ವಿಜಯನಗರ: ಆರ್​ಪಿಐ ಅಭ್ಯರ್ಥಿ

ಮಹದೇವಪುರ: ಆರ್​ಪಿಐ ಅಭ್ಯರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net