ಆಗಸ್ಟ್​ನಲ್ಲಿ ಚಂದ್ರಯಾನ-3: ಸಕಲ ಸಕಲ ಸಿದ್ಧತೆ ನಡೆಸಿದ ಇಸ್ರೋ

moon
Published on

ಬೆಂಗಳೂರು: ಈ ವರ್ಷದ ಆಗಸ್ಟ್​ನಲ್ಲಿ ಚಂದ್ರಯಾನ-3 ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಜ್ಜಾಗುತ್ತಿದೆ.

ಚಂದ್ರಯಾನ-2 ಕಾರ್ಯಾಚರಣೆಯಲ್ಲಿ ಚಂದ್ರನ ಮೇಲ್ಮೆ ಮೇಲೆ ರೋವರ್​ ಸರಾಗವಾಗಿ ಲ್ಯಾಂಡ್​ ಆಗದೆ ವಿಲವಾದ ಎರಡು ವರ್ಷಗಳ ನಂತರ ಚಂದ್ರಯಾನ-3 ಉಡಾವಣೆಗೆ ಇಸ್ರೋ ಸಿದ್ಧತೆ ನಡೆಸಿದೆ. ಚಂದ್ರಯಾನ-2 ಮಿಷನ್​ನ ವೈಲ್ಯಗಳು ಹಾಗೂ ಜಾಗತಿಕ ತಜ್ಞರ ಸಲಹೆಗಳನ್ನು ಆಧರಿಸಿ 3ನೇ ಯಾನಕ್ಕೆ ಅಗತ್ಯ ತಯಾರಿ ನಡೆಸಲಾಗುತ್ತಿದೆ ಎಂದು ಇಸ್ರೋ ತಿಳಿಸಿದೆ.

ಯೋಜನೆ ಪ್ರಕಾರ 2020ರಲ್ಲೇ ಚಂದ್ರಯಾನ-3 ಉಡಾವಣೆ ಆಗಬೇಕಿತ್ತು. ಆದರೆ ಕರೊನಾ ಹಾಗೂ ಲಾಕ್​ಡೌನ್​ ಕಾರಣಗಳಿಂದ ಅದನ್ನು ಮುಂದಕ್ಕೆ ಹಾಕಲಾಗಿತ್ತು. ಬಾಹ್ಯಾಕಾಶ ಕ್ಷೇತ್ರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಚಂದ್ರಯಾನ-3 ಪರಿಕರಗಳಲ್ಲಿ ಕೆಲವು ಮಾರ್ಪಾಡುಗಳೊಂದಿಗೆ ಕಾರ್ಯಾಚರಣೆ ನಡೆಸಲಾಗುವುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net