ನಾಳೆ ಐಐಎಫ್ ಅಧ್ಯಕ್ಷರಾಗಿ ಚಂದ್ರಶೇಖರ್ ಪದಗ್ರಹಣ

iif
ಟಿ.ಎನ್.ಪರಮಶೇಖರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದಾಮೋದರ ಬಾಳಿಗ, ಡಿ.ಜಿ.ಬೆನಕಪ್ಪ, ಶ್ರೀನಾಥ್ ಗಿರಿಮಾಜಿ, ಡಿ.ಎಸ್.ಚಂದ್ರಶೇಖರ್ ಇದ್ದರು.
Published on

ಶಿವಮೊಗ್ಗ: ಐಐಎಫ್ (ಇನ್ಸ್‌ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮನ್)ನ ಅಧ್ಯಕ್ಷರಾಗಿ ಮಾಚೇನಹಳ್ಳಿ ಶಾಂತಲಾ ಸ್ಪೆರೋಕಾಸ್ಟ್‌ನ ಉಪಾಧ್ಯಕ್ಷ ಡಿ.ಎಸ್.ಚಂದ್ರಶೇಖರ್ ಆಯ್ಕೆಯಾಗಿದ್ದು ಆ ಮೂಲಕ 75 ವರ್ಷಗಳ ಇತಿಹಾಸವಿರುವ ಸಂಘಟನೆಯೊಂದಕ್ಕೆ ಮೊದಲ ಬಾರಿಗೆ ಶಿವಮೊಗ್ಗದ ಉದ್ಯಮಿಯೊಬ್ಬರು ರಾಷ್ಟ್ರೀಯ ಅಧ್ಯಕ್ಷರಾದಂತಾಗಿದೆ.

ಕಳೆದ ವರ್ಷ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅವರು, ಇದೀಗ ಸೆ.9ರ ಸಂಜೆ 6ಕ್ಕೆ ಕಿಮ್ಮನೆ ಗಾಲ್ಫ್ ಕ್ಲಬ್‌ನಲ್ಲಿ ನಡೆಯಲಿರುವ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಐಐಎಫ್ ಶಿವಮೊಗ್ಗ ಘಟಕದ ಅಧ್ಯಕ್ಷ ಟಿ.ಎನ್.ಪರಮೇಶೇಖರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಐಐಎಫ್ ಉಪಾಧ್ಯಕ್ಷರಾಗಿ ಕೊಲ್ಕತ್ತಾದ ನವನೀತ್ ಅಗರ್‌ವಾಲ್, ಕೊಯಮತ್ತೂರಿನ ಎಸ್.ಮುತ್ತುಕುಮಾರ್ (ಗೌರವ ಕಾರ್ಯದರ್ಶಿ), ನಾಗಪುರದ ಸುಶೀಲ್ ಶರ್ಮಾ ಖಜಾಂಚಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಐಐಎಫ್ ರಾಷ್ಟ್ರೀಯ ಕೌನ್ಸಿಲ್‌ಗೆ ವಿಜಯ್ ಟೆಕ್ನೋಕ್ರಾೃಟ್ಸ್‌ನ ಡಿ.ಜಿ.ಬೆನಕಪ್ಪ, ಪಿಯರ್‌ಲಲೈಟ್ ಲೈನರ್ಸ್‌ನ ಎಸ್.ಅಂಕಿತ್ ದಿವೇಕರ್, ಶ್ರೇಯೋನಿಧಿ ಎಂಟರ್‌ಪ್ರೈಸಸ್‌ನ ಜಿ.ವಿ.ಕಿರಣ್‌ಕುಮಾರ್ ಚುನಾಯಿತರಾಗಿದ್ದಾರೆ ಎಂದು ಹೇಳಿದರು.
ಐಐಎಫ್ ಶಿವಮೊಗ್ಗ ಘಟಕದ ಸಂಸ್ಥಾಪಕ ಅಧ್ಯಕ್ಷರಾಗಿದ್ದ ದಾಮೋದರ ಬಾಳಿಗ, ಡಿ.ಎಸ್.ಚಂದ್ರಶೇಖರ್, ದಕ್ಷಿಣ ವಲಯ ಉಪಾಧ್ಯಕ್ಷ ಡಿ.ಜಿ.ಬೆನಕಪ್ಪ, ಶಿವಮೊಗ್ಗ ಘಟಕದ ಮಾಜಿ ಅಧ್ಯಕ್ಷ ಶ್ರೀನಾಥ್ ಗಿರಿಮಾಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net