8ರಂದು ಚಂದ್ರಗುತ್ತಿ ಮಹಾರಥೋತ್ಸವ

sor (1)
ಶ್ರೀ ರೇಣುಕಾಂಬ
Published on

ಸೊರಬ: ತಾಲೂಕಿನ ಐತಿಹಾಸಿಕ ಚಂದ್ರಗುತ್ತಿ ಶ್ರೀ ರೇಣುಕಾಂಬಾ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾದವು. ಕಂಕಣ ಬಂಧನ ಹಾಗೂ ಧ್ವಜಾರೋಹಣ, ಬೇರಿತಾಡನ ಕಾರ್ಯಕ್ರಮ ಜರುಗಿತು. ಮಾ.6ರಂದು ಕಲಶ ಸ್ಥಾಪನೆ, ಯಾಗಶಾಲೆ ಪ್ರವೇಶ, ವೃಷಭ ಯಂತ್ರೋತ್ಸವ, ಮಾ.7ರಂದು ಹೂವಿನ ತೇರು (ಸಣ್ಣತೇರು), 8ರಂದು ಮಹಾರಥೋತ್ಸವ(ದೊಡ್ಡತೇರು), 9ಕ್ಕೆ ಓಕುಳಿ, 10ರಂದು ತುಲಾಭಾರ ಹರಕೆ ಸಲ್ಲಿಕೆ ನೆರವೇರಲಿದೆ. ಐದು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ದೇವಸ್ಥಾನ ಆಡಳಿತಾಧಿಕಾರಿ ಹಾಗೂ ಸಮಿತಿ ಜಾತ್ರೆಗೆ ಬರುವ ಭಕ್ತರಿಗೆ ಕುಡಿವ ನೀರು, ವಿದ್ಯುತ್, ಸಾರಿಗೆ ವ್ಯವಸ್ಥೆ ಹಾಗೂ ಮೊಬೈಲ್ ಶೌಚಗೃಹ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net