ಇನ್ನೊಬ್ಬರ ಮನೆ ವಿಚಾರ ಇವರಿಗ್ಯಾಕೆ ಅನ್ನೋದೇ ನನಗೆ ತಿಳಿಯುತ್ತಿಲ್ಲ: ಚಂದನ್ ಶೆಟ್ಟಿ ಗರಂ

chandan
Published on

ಬೆಂಗಳೂರು: ಇಂದು ಬೆಂಗಳೂರಿನ ಎಂಎಂಬಿ ಲೆಗೆಸಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ, ಮಾತನಾಡಿದ ಚಂದನ್ ಮತ್ತು ನಿವೇದಿತಾ ಜೋಡಿ, ನಮ್ಮಿಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ. ಆಗಾಗ್ಗೆ ಇಬ್ಬರ ಮನಸ್ತಾಪ ಬರುತ್ತಿತ್ತು. ಹಲವಾರು ಬಾರಿ ಒಟ್ಟಿಗೆ ಇರಲು ಪ್ರಯತ್ನ ಮಾಡಿದೆವು. ಆದರೆ, ಅದು ಆಗಲಿಲ್ಲ. ಈ ಕಾರಣದಿಂದ ನಾವಿಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ ಕಾನೂನಿನ ಚೌಕಟ್ಟಿನಲ್ಲಿ ವಿಚ್ಛೇದನ ಪಡೆದೆವು ಎಂದರು.

"ಮೂರನೇ ವ್ಯಕ್ತಿಯನ್ನು ನಿವೇದಿತಾ ಜತೆ ಸೇರಿಸಿ ಸಂಬಂಧ ಕಲ್ಪಿಸಿ, ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದ್ಯಾವುದು ನಿಮಗೆ ಶೋಭೆ ತರುವುದಿಲ್ಲ. ನನ್ನ ಆಪ್ತ ಸ್ನೇಹಿತರೊಂದಿಗೆ ನಿವೇದಿತಾ ಜತೆಗಿದ್ದಾರೆ ಎಂದೆಲ್ಲಾ ಹೇಳುತ್ತಾರೆ.

ನಮ್ಮಿಬ್ಬರ ಮಧ್ಯೆ ಇಲ್ಲದೆ ಇರೋ ಬೀಜ ಬಿತ್ತನೆ ಮಾಡ್ತಿರೋದು ಏಕೆ ಅಂತ ನನಗಂತೂ ಸ್ವಲ್ಪವು ತಿಳಿಯುತ್ತಿಲ್ಲ" ಎಂದು ಚಂದನ್ ಹೇಳಿದ್ದಾರೆ.

"ಇನ್ನೊಬ್ಬರ ಮನೆ ವಿಚಾರ ಇವರಿಗೆ ಏಕೆ ಎಂಬುದು ನನಗೆ ಅರ್ಥವಾಗಿಲ್ಲ. ನಮ್ಮ ಪೋಷಕರೇ ಸುಮ್ಮನಿದ್ದಾರೆ. ಆದರೆ, ಇವರಿಗೆಲ್ಲಾ ಏನಾಗಿದೆ? ಯಾಕೆ ಹೀಗೆ ಮಾಡುತ್ತಿದ್ದಾರೆ? ಇದು ಮಾನವೀಯತೆ ಮರೆತು ಹೋದಂತೆ ಕಾಣಿಸುತ್ತಿದೆ. ನಮ್ಮ ವೈವಾಹಿಕ ಜೀವನವನ್ನು ಸಮೋತಲನ ಮಾಡಿಕೊಳ್ಳಲು ನಮಗೆ ಆಗಲಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ನಾವಿಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ ಈ ನಿರ್ಧಾರ ಕೈಗೊಂಡಿದ್ದೀವಿ ಅಷ್ಟೇ" ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net