ನೀವು ಬುದ್ಧಿವಂತರು ಎನಿಸಿಕೊಳ್ಳಬೇಕಾದ್ರೆ ಈ ಗುಣಗಳನ್ನು ಹೊಂದಿರಲೇಬೇಕು! ಜೀವನದಲ್ಲಿ ಇವು ತುಂಬಾ ಮುಖ್ಯ | Chanakya Niti

Chanakya Niti
Published on

Chanakya Niti : ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು ಇಲ್ಲ. ಅರ್ಥಶಾಸ್ತ್ರ, ಸಮಾಜ ವಿಜ್ಞಾನ, ರಾಜಕೀಯ, ರಾಜತಾಂತ್ರಿಕತೆ ಮತ್ತು ಮಿಲಿಟರಿ ಸೈನ್ಸ್ ಸೇರಿದಂತೆ ಅನೇಕ ವಿಷಯಗಳ ಮೇಲೆ ಅಗಾಧ ಜ್ಞಾನವನ್ನು ಹೊಂದಿದ್ದಾರೆ. ಪ್ರತಿಯೊಂದು ವಿಷಯದ ಮೇಲೂ ಚಾಣಕ್ಯರ ದೃಷ್ಟಿಕೋನ ತುಂಬಾ ವಿಶಾಲವಾಗಿದೆ. ಈ ಕಾರಣದಿಂದಲೇ ಮಾನವ ಜೀವನದ ಮೇಲೆ ಪರಿಣಾಮ ಬೀರುವ ಸಣ್ಣ ಮತ್ತು ದೊಡ್ಡ ವಿಚಾರ ಅಥವಾ ವಸ್ತುಗಳ ಮೇಲೆ ಬಹಳ ಸೂಕ್ಷ್ಮವಾಗಿ ಬೆಳಕು ಚೆಲ್ಲುತ್ತಾರೆ. ಚಾಣಕ್ಯನ ನೀತಿಯು ಒಬ್ಬ ವ್ಯಕ್ತಿ ಯಶಸ್ವಿಯಾಗಲು ಪ್ರೇರೇಪಿಸುತ್ತದೆ.

ಚಾಣಕ್ಯ ತತ್ವಗಳನ್ನು ಒಳಗೊಂಡಿರುವ ಚಾಣಕ್ಯ ನೀತಿ ಎಂಬ ಪುಸ್ತಕವನ್ನು ಬರೆಯಲಾಗಿದೆ. ಸಂತೋಷದ ಜೀವನದ ಅನೇಕ ರಹಸ್ಯಗಳನ್ನು ಆ ಪುಸ್ತಕದಲ್ಲಿ ತಿಳಿಸಲಾಗಿದೆ. ಅಲ್ಲದೆ, ಮನುಷ್ಯನಾಗಿ ಜನ್ಮ ತಾಳಿದ ವ್ಯಕ್ತಿ ತನ್ನ ಬದುಕನ್ನು ಸುಧಾರಿಸಿಕೊಳ್ಳಲು ಅನುಸರಿಸಬೇಕಾದ ಧರ್ಮ, ಕರ್ಮ, ಪಾಪ ಹಾಗೂ ಪುಣ್ಯಗಳ ಬಗ್ಗೆ ಚಾಣಕ್ಯನ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಅಂದಹಾಗೆ ಚಾಣಕ್ಯ ನೀತಿಯಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ, ತುಂಬಾ ಬುದ್ಧಿವಂತರಾಗಲು ಯಾವ ಗುಣಗಳನ್ನು ಹೊಂದಿರಬೇಕು ಎಂಬುದನ್ನು ಈ ಪೋಸ್ಟ್‌ನಲ್ಲಿ ನೋಡೋಣ.

Chanakya Niti

ಚಾಣಕ್ಯ ನೀತಿಯ ಪ್ರಕಾರ, ಒಬ್ಬ ವ್ಯಕ್ತಿ ತುಂಬಾ ಬುದ್ಧಿವಂತನಾಗಬೇಕಾದರೆ, ಕುಟುಂಬದ ರಹಸ್ಯಗಳನ್ನು ಬಹಿರಂಗಪಡಿಸುವ ಅಭ್ಯಾಸವನ್ನು ಹೊಂದಿರಬಾರದು. ಸ್ಮಾರ್ಟ್ ಜನರು ತಮ್ಮ ಮನೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಹೊರಗಿನ ಯಾರ ಜನರೊಂದಿಗೂ ಹಂಚಿಕೊಳ್ಳಲು ಬಯಸುವುದಿಲ್ಲ. ಕೌಟುಂಬಿಕ ಸಮಸ್ಯೆಗಳ ಬಗ್ಗೆ ಮಾತನಾಡುವುದು ನಮ್ಮ ವಿರುದ್ಧ ಅಸ್ತ್ರವಾಗಿ ಬಳಸಬಹುದು. ಆದ್ದರಿಂದ ಬುದ್ಧಿವಂತ ಜನರು ಯಾವಾಗಲೂ ಕುಟುಂಬದ ವಿಷಯಗಳನ್ನು ರಹಸ್ಯವಾಗಿಡುತ್ತಾರೆ.

Chanakya Niti

ಚಾಣಕ್ಯ ನೀತಿಯ ಪ್ರಕಾರ, ಹೆಚ್ಚು ಬುದ್ಧಿವಂತ ಜನರು ಎಂದಿಗೂ ವದಂತಿಗಳನ್ನು ನಂಬುವ ಅಭ್ಯಾಸವನ್ನು ಹೊಂದಿರುವುದಿಲ್ಲ. ಅದೇ ವೇಳೆ ವದಂತಿ ಹಬ್ಬಿಸುವ ಅಭ್ಯಾಸವೂ ಇರುವುದಿಲ್ಲ. ಆಧಾರ ರಹಿತ ಮಾಹಿತಿಯನ್ನು ನಂಬುವುದು ಮತ್ತು ಅಂತಹ ಮಾಹಿತಿಯನ್ನು ಹರಡುವುದು ಜೀವನದಲ್ಲಿ ಹಲವಾರು ಸಮಸ್ಯೆಗಳಿಗೆ ಕಾರಣವಾಗಬಹುದು ಮತ್ತು ಅದರಿಂದ ದೂರವಿರಬೇಕು ಎಂದು ತಿಳಿಯಲು ಹೆಚ್ಚಿನ ಬುದ್ಧಿವಂತಿಕೆ ಬೇಕು ಎಂದು ಚಾಣಕ್ಯ ಹೇಳುತ್ತಾರೆ.

ಚಾಣಕ್ಯನ ಪ್ರಕಾರ, ಆಹಾರವನ್ನು ಟೀಕಿಸದವರು ಹೆಚ್ಚು ಬುದ್ಧಿವಂತರಾಗಿರುತ್ತಾರೆ. ಇದನ್ನು ಬುದ್ಧಿವಂತಿಕೆಯ ಸಂಕೇತವಾಗಿ ನೋಡಲಾಗುತ್ತದೆ. ಆಹಾರದ ಬಗ್ಗೆ ಯಾವುದೇ ದೂರುಗಳಿಲ್ಲದವರು ಜೀವನದಲ್ಲಿ ನೆಮ್ಮದಿಯಿಂದ ಬದುಕಬಹುದು ಎಂದು ಚಾಣಕ್ಯ ಹೇಳುತ್ತಾರೆ. ಅವರು ಆಹಾರವನ್ನು ವ್ಯರ್ಥ ಮಾಡಲು ಇಷ್ಟಪಡುವುದಿಲ್ಲ. ಆಹಾರದ ಮೇಲಿನ ಗೌರವವು ಅತ್ಯುನ್ನತ ಬುದ್ಧಿವಂತಿಕೆಯ ಅಭಿವ್ಯಕ್ತಿ ಎಂದು ಚಾಣಕ್ಯ ಸೂಚಿಸುತ್ತಾನೆ.

Chanakya Niti

ಚಾಣಕ್ಯನ ಪ್ರಕಾರ, ತಮ್ಮ ಪ್ರೀತಿಯ ಜೀವನವನ್ನು ರಹಸ್ಯವಾಗಿಡುವವರು ಹೆಚ್ಚು ಬುದ್ಧಿವಂತರು. ಅದರಂತೆ ತಮ್ಮ ಸಂಗಾತಿಯ ಚಾರಿತ್ರ್ಯವನ್ನು ಇತರರಿಗೆ ಹೇಳುವ ಗುಣ ಇಲ್ಲದವರು ಅತ್ಯಂತ ಬುದ್ದಿವಂತರು ಎಂದು ಚಾಣಕ್ಯ ಹೇಳಿದ್ದಾರೆ.

ವಿಶೇಷ ಸೂಚನೆ: ಮೇಲಿನ ಮಾಹಿತಿ ಸಾಮಾನ್ಯ ಸಾರ್ವಜನಿಕ ಮಾಹಿತಿಯನ್ನು ಆಧರಿಸಿದೆ. ವಿಜಯವಾಣಿ.ನೆಟ್​ ಅದರ ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ. ಯಾವುದೇ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೊದಲು, ಸಂಬಂಧಿತ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net