ವಿಜೃಂಭಣೆಯಿಂದ ನಡೆದ ಚಾಮುಂಡೇಶ್ವರಿ ರಥೋತ್ಸವ

2
Published on
ಮಂಡ್ಯ: ನಗರದ ಪೊಲೀಸ್ ಕಾಲನಿಯಲ್ಲಿರುವ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ಚಾಮುಂಡೇಶ್ವರಿ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆ ನಡೆಯಿತು.
ವೈಷಾಖ ಮಾಸದ ಕೃಷ್ಣ ಪಕ್ಷದ ರೇವತಿ ನಕ್ಷತ್ರದ ಸಂದರ್ಭದಲ್ಲಿ ರಥೋತ್ಸವವನ್ನು ಪ್ರತಿ ವರ್ಷವೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಆಚರಿಸಲಾಗುತ್ತಿದೆ. ಮಧ್ಯಾಹ್ನ ೧೨.೩೦ಕ್ಕೆ ಸಲ್ಲುವ ರೇವತಿ ನಕ್ಷತ್ರದಲ್ಲಿ ತಾಯಿ ಚಾಮುಂಡೇಶ್ವರಿ ರಥೋತ್ಸವವನ್ನು ವಿಜೃಂಭಣೆಯಿಂದ ನಡೆಸಲಾಯಿತು.
ದೇವಾಲಯದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಉಡುಪ ಮಾತನಾಡಿ, ವಿಜಯದೇವರಾಜ ಅರಸು ಅವರು ೧೯೬೩ರಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ಕರ್ತವ್ಯ ಮಾಡುತ್ತಿದ್ದ ವೇಳೆ ಈ ದೇವಾಲಯವನ್ನು ನಿರ್ಮಿಸಲಾಯಿತು. ಉತ್ಸವ ಮಾಡಬೇಕು ಎಂಬ ಕಾರಣಕ್ಕೆ ಪೊಲೀಸ್ ಇಲಾಖೆಯವರೇ ಸೇರಿ ರಥವನ್ನು ನಿರ್ಮಿಸಿ  ಪ್ರತಿ ವರ್ಷ ರೇವತಿ ನಕ್ಷತ್ರದಂದು ರಥೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ಯತೀಶ್ ದಂಪತಿ, ಶಾಸಕ ರವಿಕುಮಾರ್ ಗಣಿಗ ಅವರ ಪತ್ನಿ ಸೌಂದರ್ಯ , ನಗರಸಭಾ ಸದಸ್ಯರಾದ ಗೀತಾ ಕುಮಾರಸ್ವಾಮಿ, ಶಿವಪ್ರಕಾಶ್, ಪೂರ್ಣಿಮಾ ಸೇರಿದಂತೆ ಹಲವರು ಪೂಜೆ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net