ಚಾಮರಾಜನಗರ ಬಂದ್​: ಬಸ್​ಗಳಿಲ್ಲದೆ ವಿದ್ಯಾರ್ಥಿಗಳು ಪರದಾಟ | Chamrajnagar Bandh

ವಿಜಯವಾಣಿ (7)
Published on

ಚಾಮರಾಜನಗರ: ಕೇಂದ್ರ ಸಚಿವ ಅಮಿತ್ ಷಾ ರಾಜೀನಾಮೆಗೆ ಒತ್ತಾಯಿಸಿ ದಲಿತಪರ ಮತ್ತು ಪ್ರಗತಿಪರ ಸಂಘಟನೆಗಳು ನೀಡಿರುವ ಚಾಮರಾಜನಗರ ಬಂದ್​ನಿಂದಾಗಿ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ತೀವ್ರ ಪರದಾಡುವಂತಾಗಿದೆ.

ನಗರದಲ್ಲಿ ವಿವಿಧ ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಮಂಗಳವಾರ (ಡಿ.31) ಕರೆ ನೀಡಿರುವ ಚಾಮರಾಜನಗರ ಬಂದ್ ನಿಂದಾಗಿ ಕೆಎಸ್ಆರ್​ಟಿಸಿ ಬಸ್ ಮತ್ತು ಖಾಸಗಿ ಬಸ್​ಗಳು ಸಂಚರಿಸದೇ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗಲು ಪರದಾಡಿದ್ದಾರೆ.

ನಗರದ ವಿವಿಧ ಕಾಲೇಜುಗಳಿಗೆ ಗ್ರಾಮೀಣ ಭಾಗದಿಂದ ಬಂದ ವಿದ್ಯಾರ್ಥಿಗಳು ಹಾಗೂ ಜಿಲ್ಲಾ ಕೇಂದ್ರದಿಂದ ಇಂಜಿನಿಯರಿಂಗ್ ಕಾಲೇಜು ಮತ್ತು ಇನ್ನಿತರೆ ಕಾಲೇಜುಗಳಿಗೆ ಹೋಗಬೇಕಾದ ವಿದ್ಯಾರ್ಥಿಗಳು ಸಾರಿಗೆ ಬಸ್​ಗಳ ಕೊರತೆ ಎದುರಿಸಿದ ಹಿನ್ನಲೆ ತೊಂದರೆ ಅನುಭವಿಸಿದ್ದಾರೆ. ಕೆಲವರು ಬಸ್​ಗಾಗಿ ಕಾದು ಕಾದು ನಂತರ ಆಟೋಗಳಲ್ಲಿ ತಮ್ಮ ಸ್ಥಳಕ್ಕೆ ತೆರಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net