ಗುಂಡ್ಲುಪೇಟೆ: ಪಟ್ಟಣದ ಗುರುಭವನದಲ್ಲಿ ಫೆ.18ರಂದು ಕೊಯಮತ್ತೂರು ಅರವಿಂದ ಕಣ್ಣಾಸ್ಪತ್ರೆ ವತಿಯಿಂದ ಕಣ್ಣಿನ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ಬೆಳಗ್ಗೆ 8ರಿಂದ ವಧ್ಯಾಹ್ನ 1 ಗಂಟೆವರೆಗೆ ನಡೆಯುವ ಶಿಬಿರದಲ್ಲಿ ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ, ಶಾಲಾ ಶಿಕ್ಷಣ ಇಲಾಖೆ, ಅನುಗ್ರಹ ಫೌಂಡೇಷನ್, ಡಾ.ಎನ್.ವಿಶ್ವನಾಥ್ ಕುಟುಂಬದ ಸಹಯೋಗದಲ್ಲಿ ನಡೆಯುವ ಈ ಶಿಬಿರದಲ್ಲಿ ಕಣ್ಣಿನ ಪೊರೆ, ಗ್ಲಾಕೋಮ, ನೀರು ಸೋರುವಿಕೆ, ಕಣ್ಣಿನಲ್ಲಿ ಗೀಜು ಬರುವುದು, ಹತ್ತಿರ ಮತ್ತು ದೂರದೃಷ್ಟಿ ದೋಷ, ಕಣ್ಣಿನಲ್ಲಿ ಬಿರುಕು ಉಂಟಾಗುವುದು, ವಾರೆಕಣ್ಣು, ರಾತ್ರಿ ಕುರುಡುತನ ಮುಂತಾದವುಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡಲಾಗುವುದು ಎಂದು ಅನುಗ್ರಹ ಫೌಂಡೇಷನ್ ಪ್ರಮುಖ ಕೆ.ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.