ಬಜೆಟ್ ಮೇಲೆ ಗ್ಯಾರಂಟಿ ಇಲ್ಲ

bjp-Kollegala-N.Mahesh
Published on

ಚಾಮರಾಜನಗರ: ನನಗೆ ರಾಜ್ಯ ಸರ್ಕಾರ ಮಂಡಿಸಲಿರುವ ಬಜೆಟ್ ಮೇಲೆ ಯಾವ ನಿರಿಕ್ಷೇನು ಇಲ್ಲ. ಇದು ಗ್ಯಾರಂಟಿಗಳ ಬಜೆಟ್. ಸಾರ್ವಜನಿಕರಿಗಾಗಿ ಬಜೆಟ್ ಅಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ಭಾಷಣ ನೋಡಿದ್ರೆ ಗೊತ್ತಾಗುತ್ತೆ. ಇಡೀ ಭಾಷಣ ಗ್ಯಾರಂಟಿಗಳನ್ನ ಯಶಸ್ವಿಯಾಗಿ ನಡೆಸುವುದಾಗಿದೆ. ಅಲ್ಲದೆ ಮುಂದಿನ ಬಜೆಟ್‌ಗೆ 56 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿಗಳಿಗೆ ಬೇಕಾಗುತ್ತೆ ಎಂದು ಹೇಳ್ತಿದ್ದಾರೆ. ಅದಕ್ಕೆ ಹಣಕಾಸು ಸಂಗ್ರಹದ ತರಾತುರಿಯಲ್ಲಿ ಇದ್ದಾರೆ ಎಂದರು.

ಮತ್ತೆ ಲೋಕಸಭಾ ಚುನಾವಣೆ ವೇಳೆಗೆ ಗ್ಯಾರಂಟಿ ಆಗಿರುವ ಕಡೆ ಅದನ್ನ ಮುಗಿಸುವುದಕ್ಕೆ ಪ್ಲಾನ್ ಮಾಡಿದ್ದಾರೆ. ಕೇಂದ್ರ ಅನುದಾನ ತಾರತಮ್ಯ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಗಾಗಲೇ ಬಹಳ ಸ್ಪಷ್ಟವಾಗಿ ಪ್ರಧಾನ ಮಂತ್ರಿ ನರೇಂದ್ರಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಹೇಳಿದ್ದಾರೆ. ಅಲ್ಲದೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ಅನುದಾನಗಳ ಕೊಡುಗೆಗಳ ಬಗ್ಗೆ ಹೇಳಿದ್ದಾರೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net