ಸಾಹಿತ್ಯ ಲೋಕಕ್ಕೆ ನಿಸಾರ್ ಅಹಮದ್ ಕೊಡುಗೆ ಅಪಾರ

07chn1
Published on

ಚಾಮರಾಜನಗರ : ಕನ್ನಡ ಸಾಹಿತ್ಯ ಲೋಕಕ್ಕೆ ಕವಿ ನಿಸಾರ್ ಅಹಮದ್ ಕೊಡುಗೆ ಅಪಾರ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ಹೇಳಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹಮದ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕನ್ನಡಿಗರಿಗೆ ನಿರಂತರ ಉತ್ಸಾಹ ತುಂಬುವ ನಿತ್ಯೋತ್ಸವ ಗೀತೆ ದೇಶವಿದೇಶಗಳಲ್ಲೂ ಜನಪ್ರಿಯವಾಗಿದೆ. ನಿತ್ಯೋತ್ಸವ ಗೀತೆಯ ಮೂಲಕ ಕನ್ನಡ ನಾಡು, ನುಡಿ, ಪ್ರಕೃತಿ ,ಭಾಷೆ, ಸೌಂದರ್ಯ ಪ್ರಜ್ಞೆಯನ್ನು ಜನಸಾಮಾನ್ಯರಲ್ಲಿ ಮೂಡಿಸಿ ಕನ್ನಡತನವನ್ನು ಕನ್ನಡದ ಹಬ್ಬವನ್ನಾಗಿಸಿದ ನಿಸಾರ್ ಅವರ ಕೊಡುಗೆಯನ್ನು ಕನ್ನಡ ಸಾಹಿತ್ಯ ಪ್ರಪಂಚ ಎಂದೂ ಮರೆಯದು ಎಂದರು.

ಜೋಗದ ಸಿರಿ ಬೆಳಕಿನಲ್ಲಿ, ಬೆಣ್ಣೆ ಕದ್ದ ನಮ್ಮ ಕೃಷ್ಣ ಗೀತೆಗಳು ನಿಸಾರ್ ಅಹಮದ್ ಅವರನ್ನು ಶಾಶ್ವತವಾಗಿ ಕನ್ನಡ ಸಾಹಿತ್ಯದಲ್ಲಿ ಉಳಿಸಿದೆ. ಸಂವೇದನಾಶೀಲ ,ಜನಪ್ರಿಯ ಕವಿಯಾಗಿ, ಸುಗಮ ಸಂಗೀತ ಕ್ಷೇತ್ರದ ಯಶಸ್ಸಿಗೆ ಅವರ ಕೊಡುಗೆ ಅಪಾರ ಎಂದರು. ಕನ್ನಡ ಸಾಹಿತ್ಯ ಪರಿಷತ್ ನಿರ್ದೇಶಕಿ ಸರಸ್ವತಿ, ಕಸಾಪ ತಾಲೂಕು ಕೋಶಾಧ್ಯಕ್ಷ ಆರ್.ವಿ.ಮಹದೇವಪ್ಪ, ಪದಾಧಿಕಾರಿಗಳಾದ ಬಿ.ಕೆ.ಆರಾಧ್ಯ, ಕಿಶೋರ್ ಕುಮಾರ್, ಸಿರಿಗನ್ನಡ ಪುಸ್ತಕ ಪ್ರಾಧಿಕಾರದ ಗೋವಿಂದರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net