ದೊಡ್ಡಿಂದುವಾಡಿ, ಸಿಂಗಾನಲ್ಲೂರಿನಲ್ಲಿ ಸ್ವಾಗತ

04chn2
Published on

ಚಾಮರಾಜನಗರ: ಸಂವಿಧಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ಸ್ತಬ್ಧಚಿತ್ರದ ಮೆರವಣಿಗೆಗೆ ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ, ಸಿಂಗಾನಲ್ಲೂರಿನಲ್ಲಿ ಇತ್ತೀಚೆಗೆ ಸಂಭ್ರಮದಿಂದ ಸ್ವಾಗತ ದೊರೆಯಿತು.

ದೊಡ್ಡಿಂದುವಾಡಿ ಗ್ರಾಮಪಂಚಾಯಿತಿ ಅಧ್ಯಕ್ಷ ಶಿವರುದ್ರಸ್ವಾಮಿ, ಸದಸ್ಯರು ಹಾಗೂ ಗ್ರಾಮದ ಜನರು ಸಂಭ್ರಮದಿಂದ ಜಾಥಾವನ್ನು ಬರಮಾಡಿಕೊಂಡರು.
ಡೊಳ್ಳು ಕುಣಿತ, ನಾದಸ್ವರ ಸೇರಿದಂತೆ ಇತರ ಸಾಂಪ್ರದಾಯಿಕ ಕಲಾ ತಂಡಗಳ ಮೆರುಗು ನೀಡಿದವು. ಮಧ್ಯಾಹ್ನದ ವೇಳೆಗೆ ಸಿಂಗಾನಲ್ಲೂರು ಗ್ರಾಮಕ್ಕೆ ತೆರಳಿದ ಸಂವಿಧಾನ ಜಾಗೃತಿ ಜಾಥಾ ಸ್ತಬ್ಧಚಿತ್ರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ್ಷೆ ಸರೋಜಮ್ಮ ಹಾಗೂ ಗ್ರಾಮಸ್ಥರು ಬರಮಾಡಿಕೊಂಡರು. ಮಹಿಳೆಯರು ಪೂರ್ಣಕುಂಭ ಹಿಡಿದು ಸ್ವಾಗತಿಸಿದರು. ತಮಟೆ, ಡೊಳ್ಳುವಾದನ, ಬೊಂಬೆ ಕುಣಿತ, ಜಾನಪದ ಕಲಾ ತಂಡಗಳು ಸೇರಿಂದತೆ ಅಲಂಕೃತ ಎತ್ತಿನಗಾಡಿ ಮೆರವಣಿಗೆ ಗಮನ ಸೆಳೆಯಿತು. ಯುವಕರು ಬೈಕ್ ರ‌್ಯಾಲಿ ನಡೆಸಿದರು. ವಿದಾರ್ಥಿಗಳಿಗೆ ಸಂವಿಧಾನ ಕುರಿತ ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಪುಸ್ತಕ ಜೋಳಿಗೆಗೆ ಗ್ರಾಮಸ್ಥರು ತಮ್ಮಲ್ಲಿರುವ ಉತ್ತಮ ಪುಸ್ತಕಗಳನ್ನು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net