

ಚಾಮರಾಜನಗರ: ಅವಧಿ ಮೀರಿದ ಹಾಗೂ ಮಾನವ ಸೇವನೆಗೆ ಯೋಗ್ಯವಲ್ಲದ ಸುಮಾರು 2.81 ಲಕ್ಷ ರೂ. ಮೌಲ್ಯದ 948 ಲೀಟರ್ ಮದ್ಯ ಮತ್ತು ಬಿಯರ್ ಅನ್ನು ಇತ್ತೀಚೆಗೆ ನಾಶಪಡಿಸಲಾಯಿತು.
ನಗರದ ಹೊರವಲಯದ ಕೆಲ್ಲಂಬಳ್ಳಿ- ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿರುವ ಕರ್ನಾಟಕ ಪಾನೀಯ ನಿಗಮದಲ್ಲಿ ಬಿಯರ್ ಮತ್ತು ಮದ್ಯವನ್ನು ಅಬಕಾರಿ ಉಪ ಅಧೀಕ್ಷಕ ಎಂ.ಡಿ.ಮೋಹನ್ ಕುಮಾರ್ ನೇತೃತ್ವದಲ್ಲಿ, ಕಸಬಾ ಹೋಬಳಿ ರಾಜಸ್ವ ನಿರೀಕ್ಷಕ ರಾಜಶೇಖರಮೂರ್ತಿ, ಗ್ರಾಮ ಆಡಳಿತಾಧಿಕಾರಿ ರಾಜೇಂದ್ರ ಪ್ರಸಾದ್ ಸಮ್ಮುಖದಲ್ಲಿ 876 ಲೀಟರ್ ಬಿಯರ್ ಹಾಗೂ 72 ಲೀಟರ್ ಮದ್ಯವನ್ನು ನಾಶಪಡಿಸಲಾಯಿತು. ಅಬಕಾರಿ ನಿರೀಕ್ಷಕರಾದ ಮಹದೇವ್, ಅಬಕಾರಿ ನಿರೀಕ್ಷಕಿ ಬಿ.ಪಿ. ನಂದಿನಿ, ಕೆಎಸ್‌ಬಿಸಿಎಲ್ ನಿರೀಕ್ಷಕ ಗುರುನಾಥಶೆಟ್ಟಿ, ಡಿಪೋ ವ್ಯವಸ್ಥಾಪಕ ಆರ್.ಬಿ.ಬಸವರಾಜು, ಸಿಬ್ಬಂದಿ ಸಿದ್ದರಾಜು, ಎಂ.ಪಿ. ಕುಮಾರ್ ಇತರರು ಇದ್ದರು.