ಅಪಘಾತದಲ್ಲಿ ಯುವಕ ಸಾವು

accedent
Published on

ಚಾಮರಾಜನಗರ: ನಗರದ ಹೊರ ವಲಯದಲ್ಲಿ ಎರಡು ಬೈಕ್‌ಗಳ ನಡುವೆ ಡಿಕ್ಕಿಯಾಗಿ ಒಬ್ಬ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ನಗರದ ಮೇಗಲಉಪ್ಪಾರ ಬೀದಿ ನಿವಾಸಿ ಜಯಸೂರ್ಯ(20) ಮೃತ ಯುವಕ. ಇಲ್ಲಿನ ಕೊಳದ ಬೀದಿಯ ವಿಘ್ನೇಶ್ (20), ತಾಲೂಕಿನ ಮಲ್ಲಯ್ಯನಪುರ ಗ್ರಾಮದ ಪ್ರಭುಸ್ವಾಮಿ(29) ಗಾಯಗೊಂಡಿದ್ದು, ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಬೈಪಾಸ್ ರಸ್ತೆಯ ಸೇತುವೆ ತಿರುವಿನಲ್ಲಿ ಬೆಳಗ್ಗೆ 6.30ರಲ್ಲಿ ಜಯಸೂರ್ಯ, ವಿಘ್ನೇಶ್ ಬೈಕ್‌ನಲ್ಲಿ ಬದನಗುಪ್ಪೆ ಕೈಗಾರಿಕಾ ಪ್ರದೇಶಕ್ಕೆ ಕೆಲಸಕ್ಕೆ ಹೋಗುತಿದ್ದರು. ಇತ್ತ ಪ್ರಭುಸ್ವಾಮಿ ಮತ್ತೊಂದು ಬೈಕ್‌ನಲ್ಲಿ ಬರುವಾಗ ಮುಖಾಮುಖಿ ಡಿಕ್ಕಿಯಾಗಿ ಅವಘಡ ಸಂಭವಿಸಿದೆ. ನಗರದ ಸಂಚಾರ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಚಂದ್ರಶೇಖರ ಮೂರ್ತಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net