ಸರಗೂರಿನಲ್ಲಿ ಬೈಕ್ ಸವಾರ ಸಾವು

10f60955-020e-450e-b7e0-789c5bc4fefb
Published on

ಚಾಮರಾಜನಗರ: ತಾಲೂಕಿನ ಸರಗೂರು ಗ್ರಾಮದಲ್ಲಿ ಬುಧವಾರ ಪಾದಚಾರಿಗೆ ಡಿಕ್ಕಿ ಹೊಡೆದ ಬೈಕ್ ಸವಾರ ಬಿದ್ದು ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

ಗ್ರಾಮದ ನಿವಾಸಿ, ಹರೀಶ್ ಅವರ ಪುತ್ರ ಹರ್ಷಿತ್(15) ಮೃತ ಸವಾರ. ಗ್ರಾಮದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಸಾಗುವಾಗ ಅದೇ ಗ್ರಾಮದ ಪಾದಚಾರಿ ತಾಂಡವಾಚಾರಿ ಅವರಿಗೆ ಡಿಕ್ಕಿ ಹೊಡೆದಿದ್ದು ಹೆಲ್ಮೆಟ್ ಧರಿಸದ ಪರಿಣಾಮ ಬೈಕ್ ಸವಾರ ಹರ್ಷಿತ್ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪಾದಚಾರಿ ತಾಂಡವಾಚಾರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net