ವಿಜೃಂಭಣೆಯಿಂದ ನಡೆದ ದೊಡ್ಡಮ್ಮ ತಾಯಿ ಜಾತ್ರೆ

Published on

ಚಾಮರಾಜನಗರ: ತಾಲೂಕಿನ ಕಸ್ತೂರು ಗ್ರಾಮದಲ್ಲಿ ದೊಡ್ಡಮ್ಮ ತಾಯಿ ಚಿಕ್ಕಜಾತ್ರೆ ವಿಜೃಂಭಣೆಯಿಂದ ನೆರವೇರಿತು. ಭಕ್ತರು ದೇವಿಯ ದರ್ಶನ ಪಡೆದರು.

ಭಾನುವಾರ ನಡೆದ ಜಾತ್ರೆಯಲ್ಲಿ ಕಸ್ತೂರು ಸುತ್ತಮುತ್ತಲಿನ ಹಳ್ಳಿಗಳ ಜನರು ಭಾಗವಹಿಸಿದ್ದರು. ಗ್ರಾಮದ ಒಂದು ಬಂಡಿ ಜಾತ್ರೆಯಲ್ಲಿ ಮೆರವಣಿಗೆ ನಡೆಸಿತು. ಬಂಡಿಯನ್ನು ಸಿಂಗರಿಸಿ ದೊಡ್ಡಮ್ಮತಾಯಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ದೇವಿಗೆ ಪೂಜೆ ಸಲ್ಲಿಸಿ ಮಂಗಳ ವಾದ್ಯಗಳೊಂದಿಗೆ ದೊಡ್ಡಮ್ಮತಾಯಿ ದೇವಸ್ಥಾನದವರೆಗೆ ಎಲ್ಲ ಸಮಾಜದವರು ಮೆರವಣಿಗೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net