ಸಂವಿಧಾನದಿಂದ ಸರ್ವರಿಗೂ ಸಮಾನತೆ

28chn3
Published on

ಚಾಮರಾಜನಗರ: ಜಗತ್ತಿನ ಬೃಹತ್ ಲಿಖಿತ ಸಂವಿಧಾನ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಭಾರತ ಸಂವಿಧಾನದಿಂದ ಸರ್ವರಿಗೂ ಸಮಾನತೆ ದೊರಕಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ನಟರಾಜು ತಿಳಿಸಿದರು.

ತಾಲೂಕಿನ ಚಂದಕವಾಡಿಯಲ್ಲಿ ಶನಿವಾರ ಆಯೋಜಿಸಿದ್ದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಡಾ.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ ಶ್ರೇಷ್ಠವಾಗಿದ್ದು, ಸರ್ವರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ಈ ನಿಟ್ಟಿನಲ್ಲಿ ಸಂವಿಧಾನದ ಆಶಯಗಳನ್ನು ನಾವೆಲ್ಲರೂ ಅರಿತುಕೊಂಡು ಸಾಗಬೇಕಿದೆ ಎಂದರು.

ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚಿಕ್ಕಬಸವಯ್ಯ, ಗ್ರಾಪಂ ಉಪಾಧ್ಯಕ್ಷೆ ಆರ್.ರಾಜೇಶ್ವರಿ, ಸದಸ್ಯರಾದ ಮಹೇಶ್ವರಿ, ಗಂಗಮ್ಮ, ಡಿ.ಪುಟ್ಟಸ್ವಾಮಿ, ಬೇಬಿಜಾನ್, ಚಿಕ್ಕಮಹದೇವಪ್ಪ, ನಟರಾಜು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಸಿದ್ದರಾಜು, ಕಾರ್ಯದರ್ಶಿ ಮಾದಪ್ಪ, ಎಸ್‌ಡಿಎ ರಾಜೇಶ್ ಹಾಗೂ ಶಾಲಾ ಮಕ್ಕಳು, ಮುಖ್ಯಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ, ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net