ಮರ್ಮಾಂಗಕ್ಕೆ ಬಿದ್ದ ಪೆಟ್ಟು, ನೋವು ತಡೆಯಲಾರದೆ ಆತ್ಮಹತ್ಯೆ..

suicide hang
Published on

ಚಾಮರಾಜನಗರ: ಸೈಕಲ್‌ನಲ್ಲಿ ಹೋಗುವಾಗ ಸೀಟ್ ಕಿತ್ತುಹೋಗಿ ಮರ್ಮಾಂಗಕ್ಕೆ ಪೆಟ್ಟುಬಿದ್ದು ಗಾಯಗೊಂಡಿದ್ದವನು ನೋವು ತಡೆಯಲಾಗದೆ ಆತ್ಮಹತ್ಯೆ ‌ಮಾಡಿಕೊಂಡಿದ್ದಾನೆ.

ತಾಲೂಕಿನ ಜ್ಯೋತಿಗೌಡನಪುರ ಗ್ರಾಮದ ನಿವಾಸಿ ನಂಜುಂಡನಾಯ್ಕ (60) ಮೃತ. ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ನಂಜುಂಡನಾಯ್ಕ(ರೇಚ) ಸುಮಾರು 15 ದಿನಗಳ ಹಿಂದೆ ಸೈಕಲ್‌ನಲ್ಲಿ ಹೋಗುವಾಗ ಮರ್ಮಾಂಗಕ್ಕೆ ಪೆಟ್ಟು ಬಿದ್ದಿದೆ. ಚಾಮರಾಜನಗರ ಹಾಗೂ ಮೈಸೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ‌ ನೋವು ಕಡಿಮೆಯಾಗಿಲ್ಲ.‌ ದಿನದಿಂದ ದಿನಕ್ಕೆ ನೋವು ಹೆಚ್ಚಾಗಿ ಬುಧವಾರ ಮುಂಜಾನೆ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆ ಸಮೀಪದಲ್ಲಿರುವ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net