ನೂರಿನಲ್ಲಿ ಭಕ್ತರಿಂದ ಶ್ರೀರಾಮನ ಜಪ

22 HANUR 1.
Published on

ಹನೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯ ಹಿನ್ನ್ನೆಲೆಯಲ್ಲಿ ಸೋಮವಾರ ತಾಲೂಕಿನ ರಾಮಮಂದಿರ ಹಾಗೂ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

ರಾಮನ ಭಂಟ ಹನುಮ ಜನಿಸಿದ ಸ್ಥಳ ಹನೂರು. ಪಟ್ಟಣದ ಶ್ರೀರಾಮ ಮಂದಿರವನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ ಬಣ್ಣಬಣ್ಣದ ರಂಗೋಲಿಯಿಂದ ಚಿತ್ರ ಬಿಡಿಸಲಾಗಿತ್ತು. ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿದ್ದ ಶ್ರೀರಾಮನ ಮೂರ್ತಿಗೆ ಮಧ್ಯಾಹ್ನ 12ರ ಬಳಿಕ ರಾಮ ತಾರಕ ಹೋಮ ಹಾಗೂ ಇತರ ಹೋಮ ಹವನಾದಿ ನೆರವೇರಿಸಿ ವಿಶೇಷ ಪೂಜೆ ಮಾಡಲಾಯಿತು.

ಈ ವೇಳೆ ಪುಟಾಣಿಗಳು ರಾಮ, ಸೀತೆಯ ಉಡುಗೆಗಳನ್ನು ತೊಟ್ಟು ಸಂಭ್ರಮಿಸುವುದರ ಮೂಲಕ ಜನರ ಗಮನ ಸೆಳೆದರು. ಆಗಮಿಸಿದ್ದ ಭಕ್ತರಿಗೆ ಅನ್ನ ಸಂಪರ್ತಣೆ ನಡೆಯಿತು. ಎಲ್ಲೇಮಾಳ, ವಿ.ಎಸ್ ದೊಡ್ಡಿ, ಲೊಕ್ಕನಹಳ್ಳಿ ಹಾಗೂ ಇತರ ರಾಮಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಆಗಮಿಸಿದ್ದ ಭಕ್ತರಿಗೆ ಪ್ರಸಾದ, ಮಜ್ಜಿಗೆ ಹಾಗೂ ಪಾನಕ ವಿತರಿಸಲಾಯಿತು. ಹನೂರಿನ ಶ್ರೀ ಚೆಲುವರಾಯಸ್ವಾಮಿ ದೇಗುಲ, ಆರ್.ಎಸ್. ದೊಡ್ಡಿಯ ಮಹದೇಶ್ವರ ದೇಗುಲ ಹಾಗೂ ತಾಲೂಕಿನ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಖಾಸಗಿ ಬಸ್ ನಿಲ್ದಾಣದಲ್ಲಿ ಶ್ರೀರಾಮ, ಸೀತೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಈ ವೇಳೆ ಭಕ್ತರಿಗೆ ಪ್ರಸಾದ, ಮಜ್ಜಿಗೆ ಹಾಗೂ ಪಾನಕ ವಿತರಿಸಲಾಯಿತು.

ಪಟ್ಟಣದಲ್ಲಿ ಮದ್ವೀರಶೈವ ಸದ್ಧರ್ಮ ಸಮಾಜ ಹಾಗೂ ವಿಶ್ವಕರ್ಮ ಸಮಾಜದ ವತಿಯಿಂದಲೂ ಶ್ರೀರಾಮನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ರಾಮಾಪುರದ ಶ್ರೀ ಮಹದೇಶ್ವರ ದೇಗುಲದ ಬಳಿ ಅಯೋಧ್ಯೆಯಲ್ಲಿ ಬಾಲರಾಮ ದೇವರ ಪ್ರಾಣ ಪ್ರತಿಷ್ಠಾಪನೆಯ ನೇರ ಪ್ರಸಾರವನ್ನು ಭಕ್ತರು ವೀಕ್ಷಿಸಲು ಎಲ್‌ಇಡಿ ಪರದೆ ಅಳವಡಿಸಲಾಗಿತ್ತು. ತಾಲೂಕಿನ ವಿವಿಧೆಡೆಯಲ್ಲಿ ನಡೆದ ಶ್ರೀರಾಮನ ಪೂಜಾ ಕಾರ್ಯಕ್ರಮದಲ್ಲಿ ನೆರೆದಿದ್ದ ಭಕ್ತರು ಶ್ರೀರಾಮನನ್ನು ಜಪಿಸಿದರು. ಜೈ ಶ್ರೀರಾಮ್ ಘೋಷಣೆ ಮೊಳಗಿತು. ಎಲ್ಲೆಡೆ ಕೇಸರಿ ಬಾವುಟದ ಹಾರಾಟ ಜೋರಾಗಿತ್ತು. ಮಜ್ಜಿಗೆ, ಪಾನಕ, ಕೋಸಂಬರಿ ವಿತರಣೆ ಸಾಮಾನ್ಯವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net