ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಶಿವನಾಗಪ್ಪ

27e9b07f-40bc-4162-bb52-901992aaca1d
Published on

ಚಾಮರಾಜನಗರ : ತಾಲೂಕಿನ ದೇಮಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಜಿಲ್ಲಾಧ್ಯಕ್ಷರಾಗಿ ಎಸ್.ಶಿವನಾಗಪ್ಪ ಹಾಗೂ ಉಪಾಧ್ಯಕ್ಷರಾಗಿ ರಾಜಮ್ಮ ಆಯ್ಕೆಯಾದರು.

ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಸ್.ಶಿವನಾಗಪ್ಪ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ರಾಜಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಎಂ.ಕೆ.ತ್ಯಾಗರಾಜ್ ಪ್ರಸಾದ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
ನೂತನ ಅಧ್ಯಕ್ಷ ಎಸ್.ಶಿವನಾಗಪ್ಪ ಮಾತನಾಡಿ, ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ, ಗುಡಿ ಕೈಗಾರಿಕೆ ಸೇರಿದಂತೆ ಮಹಿಳೆಯರ ಉತ್ತೇಜನಕ್ಕೆ ಶ್ರಮಿಸಲಾಗುವುದು ಎಂದರು. ಮಾಜಿ ಅಧ್ಯಕ್ಷ ಎನ್.ಸಿದ್ದಪ್ಪ , ಸದಸ್ಯ ಎಸ್.ನಟರಾಜು, ಬಿ.ರಾಜೇಂದ್ರಸ್ವಾಮಿ, ಡಿ.ಆರ್.ಗುರುಪಾದಸ್ವಾಮಿ, ಮರಿ ಸಿದ್ದಯ್ಯ, ರಾಜೇಶ್, ಡಿ.ಎಸ್.ಶ್ರೀಕಂಠಸ್ವಾಮಿ, ಗೌರಮ್ಮ, ರೇಣುಕಮ್ಮ, ಮೇಲ್ವಿಚಾರಕ ಕೆ.ಲಿಂಗರಾಜು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.ರಾಜಣ್ಣ, ಪಿ.ಪ್ರವೀಣ್, ಮಾದಪ್ಪ, ಎನ್.ಶಿವಮಲ್ಲಪ್ಪ, ಲಿಂಗಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net