

ಯಳಂದೂರು : ತಾಲೂಕಿನ ಪುಣ್ಯಕ್ಷೇತ್ರ ಬಿಳಿಗಿರಿರಂಗನ ಬೆಟ್ಟದಲ್ಲಿ ಶ್ರೀ ಬಿಳಿಗಿರಿರಂಗನಾಥಸ್ವಾಮಿಯ ಸಂಕ್ರಾಂತಿ ಚಿಕ್ಕರಥೋತ್ಸವ ಗುರುವಾರ ತೆರೆ ಕಂಡಿತು. 12 ದಿನಗಳಿಂದ ನಡೆಯುತ್ತಿದ್ದ ಜಾತ್ರಾ ಮಹೋತ್ಸವ ಗುರುವಾರ ಬೆಳಗ್ಗೆ ಸಂಧಾನಸೇವೆ, ಅವಭೃತಮಂಗಳಸ್ನಾನದ ಮೂಲಕ ಸಂಪನ್ನವಾಯಿತು.
ಬಿಳಿಗಿರಿರಂಗನಾಥಸ್ವಾಮಿ, ಅಲಮೇಲಮ್ಮ ಉತ್ಸವ ಮೂರ್ತಿಗಳನ್ನು ವಾದ್ಯಮೇಳಗಳೊಂದಿಗೆ ಕಲ್ಯಾಣಕೊಳದಲ್ಲಿ ಸ್ನಾನ ಮಾಡಿಸಿ, ನಂತರ ದೇವಾಲಯದಲ್ಲಿ ಪ್ರತಿಷ್ಠಾಪಿಸುವ ಮೂಲಕ ಜಾತ್ರೆಗೆ ತೆರೆ ಎಳೆಯಲಾಯಿತು. ದೇವರ ಚಿನ್ನದ ಸಾಮಗ್ರಿಗಳನ್ನು ತಾಲೂಕು ಉಪಖಜಾನೆಯಲ್ಲಿ ಇರಿಸಲಾಯಿತು.