ಅಪಘಾತದಿಂದ ಮೃತಪಟ್ಟ ಕುಟುಂಬಕ್ಕೆ ನೆರವು

18-kgl-1,
Published on

ಕೊಳ್ಳೇಗಾಲ: ಜಿನಕನಹಳ್ಳಿ ಗ್ರಾಮದ ಬಳಿ ಜನವರಿ 15ರಂದು ಭತ್ತ ಕಟಾವು ಯಂತ್ರ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ನಾಲ್ವರು ಮೃತಪಟ್ಟ ಕುಟುಂಬದ ಸದಸ್ಯರ ಮನೆಗೆ ಬುಧವಾರ ಸಂಜೆ ಬಿಜೆಪಿ ಮುಖಂಡರು ಭೇಟಿ ನೀಡಿ 1 ಲಕ್ಷ ರೂ. ನೆರವು ನೀಡಿ ಸಾಂತ್ವನ ಹೇಳಿದರು.

ಸಂಕ್ರಾಂತಿ ಹಬ್ಬಕ್ಕೆ ಬಟ್ಟೆ ಖರೀದಿ ಮಾಡಲು ಪಾಳ್ಯ ಗ್ರಾಮದ ಸಂತೋಷ್, ಪತ್ನಿ ಸೌಮ್ಯಾ, , ಮಕ್ಕಳಾದ ಅಭಿ, ನಿತ್ಯಾಸಾಕ್ಷಿ ಬೈಕ್‌ನಲ್ಲಿ ಕೊಳ್ಳೇಗಾಲಕ್ಕೆ ತೆರಳುವಾಗ ಜಿನಕನಹಳ್ಳಿ ಬಳಿ ಭತ್ತ ಕಟಾವು ಯಂತ್ರ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದರು. ಇವರ ಮನೆಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಕಾರ್ಯದರ್ಶಿ ವೆಂಕಟೇಶ್, ಮಾಜಿ ಶಾಸಕ ಎಸ್.ಬಾಲರಾಜು ಭೇಟಿ ನೀಡಿ ಮಗ, ಸೊಸೆ ಹಾಗೂ ಮೊಮ್ಮಕ್ಕಳನ್ನು ಕಳೆದುಕೊಂಡಿರುವ ಮೃತರ ಕುಟುಂಬದ ಹಿರಿಯರಿಗೆ ಸಾಂತ್ವನ ಹೇಳಿದರು. ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಜೈ ಸುಂದರ್ ನಾಯಕ್, ಮುಖಂಡ ಪರಶಿವ, ಜಗದೀಶ್ ಶಂಕನಪುರ, ಶಿವು ಸರಗೂರು, ಸೋಮಣ್ಣ ಶಂಕನಪುರ, ಉಗನೀಯ ಮೂರ್ತಿ, ಸಿದ್ದರಾಜು ಕೆಂಪನಪಾಳ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net