ಮಾಹಿತಿ ನೀಡದ ಅಧಿಕಾರಿಗೆ 25 ಸಾವಿರ ರೂ. ದಂಡ

Published on

ಚಾಮರಾಜನಗರ: ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಗೆ ಸೂಕ್ತ ಮಾಹಿತಿಯನ್ನು ನೀಡದ ಕೊಳ್ಳೇಗಾಲ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ.ನಾಗೇಶ್ ಅವರಿಗೆ ಕರ್ನಾಟಕ ಮಾಹಿತಿ ಆಯೋಗ 25 ಸಾವಿರ ರೂ. ದಂಡ ವಿಧಿಸಿದೆ.

ಕೊಳ್ಳೇಗಾಲ ತಾಲೂಕಿನಲ್ಲಿ ಸ್ವಚ್ಛಭಾರತ್ ಮಿಷನ್ ಯೋಜನೆಯಡಿ ಶೌಚಗೃಹಗಳನ್ನು ನಿರ್ಮಾಣ ಮಾಡಿರುವ ಅಂಗನವಾಡಿ ಕೇಂದ್ರಗಳ ಹೆಸರು, ವಿಳಾಸ, ದುರಸ್ತಿ ಮತ್ತು ನವೀಕರಣ ಕಾಮಗಾರಿಗಳಿಗೆ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನದ ವಿವರ ಹಾಗೂ ಬಾಲವಿಕಾಸ ಸಮಿತಿ ಖಾತೆಗೆ ಜಮಾ ಆಗಿರುವ 2019-22ನೇ ಸಾಲಿನ ಮೊತ್ತದ ಮಾಹಿತಿಯನ್ನು ನೀಡುವಂತೆ ಕೆ.ದೇವಪ್ರಸಾದ್ ಎಂಬುವರು 2022 ಆ.11 ರಂದು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಆದರೆ ಸೂಕ್ತ ಮಾಹಿತಿಯನ್ನು ನೀಡದ ಕಾರಣ ಮಾಹಿತಿ ಹಕ್ಕು ಆಯೋಗ 2023 ಜೂ.28 ರಂದು ಪ್ರಕರಣ ಸಂಬಂಧ ವಿಚಾರಣೆ ನಡೆಸಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ದಂಡ ವಿಧಿಸಿದೆ. ಅದರಂತೆ, ಆಯೋಗಕ್ಕೆ ಎಂ.ನಾಗೇಶ್ ಅವರು ಏಕಕಾಲದಲ್ಲಿ 25 ಸಾವಿರ ರೂ.ಗಳನ್ನು ದಂಡವಾಗಿ ಕಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net