ಬಸ್ ಕೆಟ್ಟು ಪರದಾಡಿದ ಪ್ರಯಾಣಿಕರು

08 yelandur 03
Published on

ಯಳಂದೂರು : ತಾಲೂಕಿನ ಬಿಆರ್‌ಟಿ ಕಾಡಂಚಿನ ಗ್ರಾಮಗಳಿಗೆ ಸಂಚರಿಸಬೇಕಿದ್ದ ಕೆಎಸ್‌ಆರ್‌ಟಿಸಿ ಬಸ್ ಸೋಮವಾರ ಸಂಜೆ ಬಸ್ ಪಟ್ಟಣದ ನಿಲ್ದಾಣದಲ್ಲೇ ಕೆಟ್ಟು ನಿಂತ ಪರಿಣಾಮ ವಿದ್ಯಾರ್ಥಿಗಳು, ಪ್ರಯಾಣಿಕರು ಪರದಾಡಿದರು.

ಬಿಆರ್‌ಟಿ ಅರಣ್ಯ ವ್ಯಾಪ್ತಿಯ ದಾಸನಹುಂಡಿ, ಮುಂಟಿಪಾಳ್ಯ, ಕೆ.ದೇವರಹಳ್ಳಿ ಬೆಲ್ಲವತ್ ಗ್ರಾಮಗಳಿಗೆ ಸಂಜೆ 5.15 ಗಂಟೆಗೆ ತೆರಳಬೇಕಿದ್ದ ಪಟ್ಟಣದ ಬಸ್ ನಿಲ್ದಾಣದಲ್ಲೆ ಕೆಟ್ಟು ಹೋಗಿ ನಿಂತಿತು. ಪರಿಣಾಮ 30ಕ್ಕೂ ಹೆಚ್ಚು ಪ್ರಯಾಣಿಕರು, ವಿದ್ಯಾರ್ಥಿಗಳು ಪರಾಡುವಂತಾಯಿತು. ಚಾಮರಾಜನಗರ ಡಿಪೋ ವ್ಯವಸ್ಥಾಪಕರಿಗೆ ದೂರವಾಣಿಗೆ ಕರೆ ಮಾಡಿ ವಿಷಯ ತಿಳಿಸಲಾಯಿತು. 6.45ರ ಬಳಿಕ ಬಸ್ ಮತ್ತೊಂದು ಬಸ್ ಕಳುಹಿಸಲಾಯಿತು. ಸುಮಾರು ಒಂದೂವರೆ ತಾಸಿಗೂ ಹೆಚ್ಚು ಸಮಯ ಕಾಯ್ದು ಸುಸ್ತಾಗಿದ್ದ ಪ್ರಾಯಾಣಿಕರು, ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net