

ಚಾಮರಾಜನಗರ: ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸದೇ ಅವುಗಳನ್ನು ಮೆಟ್ಟಿ ನಿಂತು ಸಾಧನೆಯತ್ತ ಗಮನಹರಿಸಿದರೆ ಯಶಸ್ಸು ಖಂಡಿತ ನಮ್ಮದಾಗುತ್ತದೆ ಎಂದು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಶಮಿತ್‌ಕುಮಾರ್ ತಿಳಿಸಿದರು.
ತಾಲೂಕಿನ ವೆಂಕಟಯ್ಯನಛತ್ರ ಗ್ರಾಮದಲ್ಲಿ ಫ್ರೆಂಡ್ಸ್‌ಕ್ಲಬ್ ವತಿಯಿಂದ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಖೋ-ಖೋ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಭಾರತೀಯರ ಗ್ರಾಮೀಣ ಕ್ರೀಡೆಯಾದ ಖೋಖೋ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಈ ಕ್ರಿಡೆಯನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಎಲ್ಲರದ್ದಾಗಿದೆ. ಯುವಕರು ಇಂತಹ ಕ್ರಿಡೆಗಳಲ್ಲಿ ಹೆಚ್ಚಾಗಿ ಭಾಗವಹಿಸಬೇಕು. ಕೇವಲ ಮಾತಿನಿಂದ ಸಾಧನೆ ಸಾಧ್ಯವಿಲ್ಲ. ಅದಕ್ಕೆ ತನ್ನದೇಯಾದ ಶ್ರಮವಿರಬೇಕು. ಗ್ರಾಮೀಣ ಭಾಗದ ಯುವಕರು ಹುಟ್ಟಿನಿಂದಲೇ ಕಷ್ಟ ನೋಡಿ ಬೆಳೆದಿರುತ್ತಾರೆ. ಜೀವನದಲ್ಲಿ ಎದುರಾಗುವ ತೊಂದರೆಗಳನ್ನು ದೊಡ್ಡದು ಮಾಡಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ದೈಹಿಕ ಶಿಕ್ಷಕ ನಟರಾಜ್ ಮಾತನಾಡಿ, ದೇಶದ ಹಲವು ರಾಜ್ಯಗಳಲ್ಲಿ ಖೋಖೋ ದಿನಾಚರಣೆ ಆಚರಣೆ ಮಾಡುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲೂ ಸಹ ಕಳೆದ ವರ್ಷದಿಂದ ಫ್ರೆಂಡ್ಸ್ ಕ್ಲಬ್ ಸದಸ್ಯರು ಖೋ-ಖೋ ದಿನಾಚರಣೆ ಮಾಡುತ್ತಿರುವುದು ವಿಶೇಷವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕ್ಲಬ್ ಗೌರವಾಧ್ಯಕ್ಷ ಪ್ರಶಾಂತ್ ನಂಜೆದೇವನಪುರ, ಉಪನ್ಯಾಸಕ ಪ್ರಶಾಂತ್, ಮಹಾಂತೇಶ್, ಮುಖಂಡ ಚಿಕ್ಕಮೋಳೆ ಮಹೇಶ್, ದೈಹಿಕ ಶಿಕ್ಷಣ ಶಿಕ್ಷಕ ಶ್ರೀಧರ್, ಕ್ರಿಡಾಪಟು ನವೀನ್, ಧರ್ಮ, ಫ್ರೆಂಡ್ಸ್ ಕ್ಲಬ್ ಸದಸ್ಯರಾದ ಸತೀಶ್, ರಾಜು ಹೊಸೂರು, ಪ್ರಸಾದ್, ಚಂದು, ಮಹದೇವಪ್ರಸಾದ್, ಮಣಿಕಂಠ, ರಾಹುಲ್, ಮಧು, ದರ್ಶನ್, ಕೆಂಪರಾಜು, ಮಹಾದೇವಸ್ವಾಮಿ, ಕಿರಣ್, ನಿತಿನ್, ಚೇತನ್ ಹಾಜರಿದ್ದರು.