ಮಾ.18ರಂದು ಸಾಮೂಹಿಕ ವಿವಾಹ

Published on

ಚಾಮರಾಜನಗರ: ತಾಲೂಕಿನ ಚಂದಕವಾಡಿ ಗ್ರಾಮದ ಶ್ರೀ ಶನೈಶ್ಚರಸ್ವಾಮಿ ದೇವಸ್ಥಾನದಲ್ಲಿ ಶ್ರೀ ಶನೈಶ್ಚರಸ್ವಾಮಿಯ 32ನೇ ವರ್ಷದ ಆರಾಧನಾ ಮಹೋತ್ಸವ ಅಂಗವಾಗಿ ಮಾ.18 ರಂದು 37 ಜೋಡಿಯ ಸಾಮೂಹಿಕ ವಿವಾಹ ಮಹೋತ್ಸವ ಏರ್ಪಡಿಸಲಾಗಿದೆ.


ಭಾಗವಹಿಸುವ ವಧು-ವರರಿಗೆ ಉಚಿತವಾಗಿ ವಸ ಮಾಂಗಲ್ಯ, ಕಾಲುಂಗುರಗಳನ್ನು ನೀಡಲಾಗುವುದು. ಸಾಮೂಹಿಕ ವಿವಾಹಕ್ಕೆ ಯಾವುದೇ ಜಾತಿ ಭೇದವಿಲ್ಲದೇ ವಧು-ವರರು ಭಾಗವಹಿಸಬಹುದು.
ವಧುವಿಗೆ 18 ವರ್ಷ, ವರನಿಗೆ 21 ವರ್ಷ ಕಡ್ಡಾಯವಾಗಿದ್ದು ಮಾ.9 ನೋಂದಣಿಗೆ ಕಡೆಯದಿನವಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಆರಾಧನಾ ಮಹೋತ್ಸವ ಸಮಿತಿಯ ಅಧ್ಯಕ್ಷ ಸಿ.ಎಲ್.ರಂಗರಾಮು ಹಾಗೂ ಶೆಲ್ವಂ ಮನವಿ ಮಾಡಿದ್ದಾರೆ. ವಿವರಗಳಿಗೆ ಮೊ: 8277647617, 9742116207 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net