ತಡವಾಗಿ ರಂಗೇರಿದ ಮತದಾನ

10raju2
Published on

ಚಾಮರಾಜನಗರ: ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಮತದಾನ ಪ್ರಕ್ರಿಯೆ ತಡವಾಗಿ ಚುರುಕುಗೊಂಡಿತು. ಬೆಳಗ್ಗೆಯಿಂದ ಕಡಿಮೆ ಇದ್ದ ಜನರು ಹೊತ್ತು ಕಳೆಯುತ್ತಿದ್ದಂತೆಯೇ ಮತಗಟ್ಟೆಗೆ ಬಂದರು.

ಜಿಲ್ಲೆಯಲ್ಲಿ 11 ಗಂಟೆ ವೇಳೆಗೆ ಶೇ.16.66ರಷ್ಟು ಮತದಾನವಾಗಿತ್ತು. ಚಾಮರಾಜನಗರದಲ್ಲಿ ಶೇ. 20.53, ಗುಂಡ್ಲುಪೇಟೆಯಲ್ಲಿ ಶೇ.20.50, ಹನೂರಿನಲ್ಲಿ ಶೇ.16.50, ಕೊಳ್ಲೇಗಾಲದಲ್ಲಿ ಶೇ.9.30ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 1 ಗಂಟೆ ವೇಳೆಗೆ ಜಿಲ್ಲೆಯಲ್ಲಿ ಒಟ್ಟು ಶೇ. 30.66ರಷ್ಟು ವೋಟು ಬಿದ್ದಿದ್ದವು. ಚಾಮರಾಜನಗರದಲ್ಲಿ ಶೇ. 37.77, ಗುಂಡ್ಲುಪೇಟೆಯಲ್ಲಿ ಶೇ.25.09, ಹನೂರಿನಲ್ಲಿ ಶೇ.28.26, ಕೊಳ್ಲೇಗಾಲದಲ್ಲಿ ಶೇ.31.73ರಷ್ಟು ಮತದಾನವಾಗಿತ್ತು.

ಮಧ್ಯಾಹ್ನ 3 ಗಂಟೆ ವೇಳೆಯಲ್ಲಿ ಜಿಲ್ಲೆಯಲ್ಲಿ ಶೇ.51.71ರಷ್ಟು ಮತ ಚಲಾವಣೆಯಾಗಿತ್ತು. ಚಾಮರಾಜನಗರದಲ್ಲಿ ಶೇ. 51.81, ಗುಂಡ್ಲುಪೇಟೆಯಲ್ಲಿ ಶೇ.54.70, ಹನೂರಿನಲ್ಲಿ ಶೇ.51.68, ಕೊಳ್ಲೇಗಾಲದಲ್ಲಿ ಶೇ.48.70ರಷ್ಟು ಮತದಾನವಾಗಿತ್ತು. ಸಂಜೆ 5 ಗಂಟೆ ವೇಳೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 69.31ರಷ್ಟು ಮತದಾನ ನಡೆದಿತ್ತು. ಚಾಮರಾಜನಗರದಲ್ಲಿ ಶೇ.73.25, ಗುಂಡ್ಲುಪೇಟೆಯಲ್ಲಿ ಶೇ.76.81, ಹನೂರಿನಲ್ಲಿ ಶೇ.62.57, ಕೊಳ್ಲೇಗಾಲದಲ್ಲಿ ಶೇ.65ರಷ್ಟು ಮತದಾನ ನಡೆದಿತ್ತು.

ಹೇಗಿತ್ತು ಮತದಾನ?
ಚಾಮರಾಜನಗರ ವಿಧಾನಸಭಾ ಕ್ಷೇತ್ರದ ನಿರ್ಣಾಯ ಹೋಬಳಿ ಎಂದೇ ಕರೆಸಿಕೊಳ್ಳುವ ಚಂದಕವಾಡಿ ಗ್ರಾಮದಲ್ಲಿ ಮತದಾನ ಬಿರುಸಿನಿಂದ ಕೂಡಿತ್ತು. ಹೊಂಡರಬಾಳು, ಮಲ್ಲೇದೇವನಹಳ್ಳಿ, ಅಯ್ಯನಪುರ, ಕೊಕ್ಕನಹಳ್ಳಿ, ನಾಗವಳ್ಳಿ, ಚಂದಕವಾಡಿ, ಸರಗೂರು, ಹುರುಳಿನಂಜನಪುರ, ಕಾಗಲವಾಡಿ, ಕರಿಯನಕಟ್ಟೆ, ಆಲೂರು ಗ್ರಾಮಗಳಲ್ಲಿ ಮತದಾರರು ಮತ ಚಲಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net