

ಚಾಮರಾಜನಗರ: ದೊಡ್ಡಬಳ್ಳಪುರದಲ್ಲಿ ರಾಜ್ಯ ವೈಜ್ಞಾನಿಕ ಸಂಶೋದನ ಪರಿಷತ್ತು ಆಯೋಜಿಸಿದ್ದ ಹಲವು ಕ್ಷೇತ್ರಗಳಲ್ಲಿ ಸಮಾಜ ಸೇವೆ ಸಲ್ಲಿಸುತ್ತ ಬಂದಿರುವವರಿಗೆ ಕೊಡ ಮಾಡುವ ರಾಜ್ಯಮಟ್ಟದ ಕಾಯಕ ರತ್ನ ಪ್ರಶಸ್ತಿಯನ್ನು ಚಾಮರಾಜನಗರ ಪರಿಸರ ಪ್ರೇಮಿ ಹಾಗೂ ಲೆಕ್ಕ ಪರಿಶೋಧಕ ಸಿ.ಎಂ.ವೆಂಕಟೇಶ್‌ಗೆ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಪ್ರಶಸ್ತಿ ಪ್ರಧಾನ ಮಾಡಿದರು.
ಈ ಸಂದರ್ಭದಲ್ಲಿ ಸಿ.ಎಂ.ವೆಂಕಟೇಶ್ ಮಾತನಾಡಿ, ಪರಿಸರ ಸಂರಕ್ಷಣೆಯಿಂದ ಪ್ರತಿಯೊಬ್ಬರ ಆರೋಗ್ಯವು ಉತ್ತಮವಾಗಿರುತ್ತದೆ. ಚಾಮರಾಜನಗರ ದಿಂದ ಗಿಡಗಳನ್ನು ನೆಡಲು ಪ್ರಾರಾಂಭವಾದ ನನ್ನ ಪಯಣ ಈಗ ಚಾಮರಾಜನಗರದ ಜಿಲ್ಲೆಯ ಮಹದೇಶ್ವರಬೆಟ್ಟದ ವರೆಗೂ ತಲುಪಿದೆ. ಈಗಾಗಲೇ ಚಾಮರಾಜನಗರ, ಸಂತೇಮರಳ್ಳಿ, ಮಲೈ ಮಹದೇಶ್ವರಬೆಟ್ಟ ಈ ಪಟ್ಟಣ ಪ್ರದೇಶಗಳಲ್ಲಿ ಗಿಡಗಳನ್ನು ತೆಟ್ಟು ಪೋಷಣೆ ಮಾಡಲಾಗುತ್ತಿದೆ. ಮುಂದಿನ ತಿಂಗಳು ಕೊಳ್ಳೆಗಾಲ ಪಟ್ಟಣದಲ್ಲಿ 250 ಸಾಲು ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನನ್ನ ಉದ್ದೇಶ ಜಿಲ್ಲಾಧ್ಯಂತ 1 ಲಕ್ಷ ಗಿಡಗಳನ್ನು ನೆಡುವುದು. ಗಡಿ ಜಿಲ್ಲೆಯ ನಿವಾಸಿಯಾದ ನನ್ನನು ಗುರುತಿಸಿ ಗೌರವಿಸುತ್ತಿರುವುದು ನನ್ನ ಜವಬ್ದಾರಿಯನ್ನು ಇನ್ನೂ ಹೆಚ್ಚಿಸಿದೆ ಎಂದರು.
ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲೇಗೌಡ, ಹುಲಿಕಲ್ ನಟರಾಜು, ಡಾ.ಅಂಜನಪ್ಪ, ತೋಂಟಧಾರ‌್ಯ ಮಠದ ಶ್ರೀನಿಜಗುಣ ಸ್ವಾಮೀಜಿ, ಕೆ.ಪಿ.ಲಕ್ಷ್ಮಿನಾರಾಯಣ ಹಾಗೂ ಇತರರು ಇದ್ದರು.