ಮಹನೀಯರನ್ನು ಸ್ಮರಿಸುವುದು ಕರ್ತವ್ಯ

02 Raju 1
Published on

ಚಾಮರಾಜನಗರ: ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ರೋಟರಿ ಅಧ್ಯಕ್ಷ ಕೆ.ಎಂ. ಮಹದೇವಸ್ವಾಮಿ ಹೇಳಿದರು.


ನಗರದ ರೋಟರಿ ಭವನದಲ್ಲಿ ರೋಟರಿ ಸಂಸ್ಥೆ ವತಿಯಿಂದ ಮಂಗಳವಾರ ಆಯೋಜಿಸಿದ್ದ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.


ಕರುನಾಡು ಎಂಬ ಪದವೇ ಅಮೃತಕ್ಕೆ ಸಮಾನ. ಕರ್ನಾಟಕ ಬರೀ ನಾಡಲ್ಲ, ನಮ್ಮ ಸಂಸ್ಕೃತಿಯ ಧಾತು. ಕರ್ನಾಟಕ ಅಷ್ಟೇ ಅಲ್ಲದೆ ದೇಶ ವಿದೇಶಗಳಲ್ಲಿರುವ ಕನ್ನಡಿಗರು ಸಹ ಆಯಾ ಪ್ರದೇಶಗಳಲ್ಲಿ ಕನ್ನಡ ರಾಜ್ಯೋತ್ಸವನ್ನು ಆಚರಿಸುತ್ತಾರೆ ಎಂದರು.

ರೋಟರಿಯನ್‌ಗಳಾದ ಸಿ.ವಿ. ಶ್ರೀನಿವಾಸಶೆಟ್ಟಿ, ಜಿ.ಆರ್. ಅಶ್ವಥ್ ನಾರಾಯಣ್, ಆರ್.ಎಂ. ಸ್ವಾಮಿ, ನಾಗರಾಜು, ಗುರುಸ್ವಾಮಿ, ಕೆಂಪನಪುರ ಸಿದ್ದರಾಜು, ಎಚ್.ಎಸ್. ಗಂಗಾಧರ್, ಕೋಡಿಮೋಳೆ ರಾಜಶೇಖರ್, ಚಂದ್ರಪ್ರಭಜೈನ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net