ಅಧ್ಯಕ್ಷರಾಗಿ ಚಲುವೇಗೌಡ, ಉಪಾಧ್ಯಕ್ಷರಾಗಿ ಚಿಕ್ಕನಾಯಕ ಆಯ್ಕೆ

ಅಧ್ಯಕ್ಷರಾಗಿ ಚಲುವೇಗೌಡ, ಉಪಾಧ್ಯಕ್ಷರಾಗಿ ಚಿಕ್ಕನಾಯಕ ಆಯ್ಕೆ
Published on

ಹಂಪಾಪುರ: ಹಂಪಾಪುರ ಹೋಬಳಿ ಚಾಮಹಳ್ಳಿ ಹಾಲು ಉತ್ಪದಕರ ಸಹಕಾರ ಸಂಘದ ಪ್ರಥಮ ಆಡಳಿತ ಮಂಡಳಿ ಅಧ್ಯಕ್ಷರಾಗಿ ಚಲುವೇಗೌಡ, ಉಪಾಧ್ಯಕ್ಷರಾಗಿ ಚಿಕ್ಕನಾಯಕ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿ ಅಶ್ವಿನ್ ಅಧ್ಯಕ್ಷ, ಉಪಾಧ್ಯಕ್ಷರನ್ನು ಭಾನುವಾರ ನಡೆದ ಚುನಾವಣೆಯಲ್ಲಿ ಘೊಷಿಸಿದರು.

ನಿರ್ದೇಶಕ ಸಿ.ಕೆ. ಚಂದ್ರು, ದೊಡ್ಡ ಕರಿಗೌಡ, ಎಂ.ಬಾಲು, ಕರಿಯಯ್ಯ, ಸಾಕಮ್ಮ, ವಿಜಿ ಗೌಡ, ಕರಿಯಪ್ಪ, ಜಯಕುಮಾರ್, ಕೆಂಪೇಗೌಡ್ರು, ಮಹದೇವಸ್ವಾಮಿ, ಸಿ ಚಲುವರಾಜು, ಗ್ರಾ.ಪಂ.ಸದಸ್ಯ ಶ್ರೀನಿವಾಸ್, ಪುಟ್ಟರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net