ನಟ ದರ್ಶನ್​ ಈಗ ಕರ್ನಾಟಕ ಕೃಷಿ ಇಲಾಖೆ ರಾಯಭಾರಿ; ಯಾವುದೇ ಸಂಭಾವನೆ ಪಡೆಯದೇ ಅಂಬಾಸಡರ್..

Untitled-1
Published on

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್​ ಇದೀಗ ಕರ್ನಾಟಕ ಸರ್ಕಾರದ ಕೃಷಿ ಇಲಾಖೆ ರಾಯಭಾರಿ ಆಗಿದ್ದಾರೆ. ಯಾವುದೇ ಸಂಭಾವನೆ ಪಡೆಯದೇ ರಾಯಭಾರಿ ಆಗಿರುವ ಅವರು ಇದೀಗ ಅಧಿಕೃತವಾಗಿ ಆ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ವಿಕಾಸ ಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಅವರು ಈಗ ತಾನೇ ರಾಜ್ಯ ಕೃಷಿ ಇಲಾಖೆ ರಾಯಭಾರಿ ಆಗಿ ಅಧಿಕಾರವನ್ನು ಸ್ವೀಕರಿಸಿದರು. ಆ ಮೂಲಕ ಕೃಷಿ ಇಲಾಖೆಯ ರಾಯಭಾರಿ ಆಗಿ ನಟ ದರ್ಶನ್ ನೇಮಕವಾದರು.

ಮಾಸ್ ನಾಯಕ ದರ್ಶನ್​ ಅವರನ್ನು ನೋಡಲು ವಿಕಾಸ ಸೌಧದ ಸಿಬ್ಬಂದಿ ಕೂಡ ಮುಗಿಬಿದ್ದರು. ದರ್ಶನ್ ಅವರನ್ನು ಕಣ್ತುಂಬಿಸಿಕೊಳ್ಳು ಸಲುವಾಗಿ ಆಗಮಿಸಿದವರಿಂದ ವಿಕಾಸ ಸೌಧದ ಸಭಾಂಗಣ ಹೌಸ್ ಫುಲ್​ ಆಗಿತ್ತು.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net