ಸೂರತ್‌ಗೆ ಹೋಗಿ ಬಂದವರ ಮೇಲೆ ನಿಗಾ

CLK THO 03
Published on

ಚಳ್ಳಕೆರೆ: ಗುಜರಾತಿನ ಸೂರತ್‌ಗೆ ಹೋಗಿ ಮರಳಿದ 12 ಮುಸ್ಲಿಮರ ಆರೋಗ್ಯ ತಪಾಸಣೆ ನಡೆಸಿ, ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯದ ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಎನ್.ಪ್ರೇಮಸುಧಾ ತಿಳಿಸಿದರು.

ನಗರದ ಸಾರ್ವಜನಿಕ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿದ್ದ ಜಿಲ್ಲಾ ಸರ್ವೇಕ್ಷಣಾ ಘಟಕದ ಆರೋಗ್ಯ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿದರು.

12 ಜನರ ಗಂಟಲ ದ್ರವ ಸಂಗ್ರಹಿಸಿ ಬೆಂಗಳೂರು, ಶಿವಮೊಗ್ಗ ಲ್ಯಾಬ್‌ಗೆ ಕಳುಹಿಸಿ ಕೊಡುತ್ತೇವೆ. 48 ಗಂಟೆಗಳಲ್ಲಿ ವರದಿ ಸಿಗಲಿದೆ ಎಂದು ಸ್ಪಷ್ಟಪಡಿಸಿದರು.

ಆರೋಗ್ಯ ಸಹಾಯಕ ಎಸ್.ಬಿ.ತಿಪ್ಪೇಸ್ವಾಮಿ ಮಾತನಾಡಿ, ಹೊರ ಜಿಲ್ಲೆಗಳಿಂದ ನಗರಕ್ಕೆ ಬಂದಿರುವ 14391 ಜನರ ಮಾಹಿತಿ ಮತ್ತು ಆರೋಗ್ಯದ ವಾಸ್ತವ ಸ್ಥಿತಿ ದಾಖಲಿಸಿಕೊಂಡಿದ್ದೇವೆ. ಅನ್ಯ ರಾಜ್ಯಗಳಿಂದ ಬಂದಿರುವ 395, ಹೊರ ದೇಶದಿಂದ ಆಗಮಿಸಿದ 14 ಜನರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net