ಕಾವೇರಿ ಕರ್ನಾಟಕ, ತಮಿಳುನಾಡು ಎರಡಕ್ಕೂ ಸೇರಿದ್ದು: ಚಕ್ರವರ್ತಿ ಸೂಲಿಬೆಲೆ

Untitled design - 2023-09-29T145026.636
Published on

ಮಂಡ್ಯ: ರಾಜ್ಯಾವ್ಯಾಪಿ ನಡೆಯುತ್ತಿರುವ ಕಾವೇರಿ ಹೋರಾಟದ ಕುರಿತು ಮಂಡ್ಯದಲ್ಲಿ ಮಾತನಾಡಿದ ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ, "ಪ್ರತಿವರ್ಷ ಕಾವೇರಿ ನದಿ ಸ್ವಚ್ಛಗೊಳಿಸುತ್ತೇವೆ. ಕಾವೇರಿ ಹೋರಾಟಕ್ಕೆ ಮಾತ್ರ ಬರುವ ಜನರಲ್ಲ ನಾವು, ಅದರ ಉಳಿವಿಗಾಗಿಯು ನಿರಂತರವಾಗಿ ಹೋರಾಟ ಮಾಡ್ತಿದ್ದೇವೆ" ಎಂದು ಹೇಳಿದ್ದಾರೆ.

"ಕಾವೇರಿ ಕರ್ನಾಟಕ, ತಮಿಳುನಾಡು ಇಬ್ಬರಿಗೂ ಸೇರಿದ್ದು, ಬರಗಾಲ ಬಂದಾಗ ಕಾವೇರಿ ಸಮಸ್ಯೆ ಶುರುವಾಗುತ್ತದೆ. ಸಮಸ್ಯೆ ಬಂದಾಗ ಎರಡು ರಾಜ್ಯಗಳು ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಬೇಕು. ಆದ್ರೆ, ದುರದೃಷ್ಟಕರ ಪ್ರಾಧಿಕಾರ ಹೇಳುವ ಮುನ್ನವೇ ನೀರು ಹರಿಸಿದ್ದಾರೆ. ಕನ್ನಡದ ಮಣ್ಣಿನ ಮಕ್ಕಳಿಗೆ ಆಗುತ್ತಿರುವ ಅನ್ಯಾಯವನ್ನು ಸಹಿಸಿಕೊಳ್ಳಲು ಆಗುವುದಿಲ್ಲ" ಎಂದು ಹೇಳಿದರು.

"ಇಬ್ಬರ ನಡುವೆ ಜಗಳ ನಡೆದರೆ ಪ್ರಧಾನಿಗಳು ಬಿಡಿಸೋಕೆ ಬರಬೇಕು. ಆದ್ರೆ, ಇಲ್ಲಿ ಜಗಳವೆ ಆಗಿಲ್ಲ. ಇನ್ನೂ ಪ್ರಧಾನಿ ಹೇಗೆ ಬರಲು ಸಾಧ್ಯ?

ತಮಿಳುನಾಡು ನೀರು ಕೇಳುವ ಮುನ್ನವೇ ಕರ್ನಾಟಕ ಸರ್ಕಾರ ನೀರು ಹರಿಸಿದೆ. ಇಬ್ಬರು ಸೆಟಲ್ ಆಗಿರುವಾಗ ಯಾರು ಮಧ್ಯಪ್ರವೇಶ ಮಾಡುತ್ತಾರೆ. ಸಿಎಂ ಸಿದ್ದರಾಮಯ್ಯ ಪ್ರಧಾನಿ ಮಧ್ಯಸ್ಥಿಕೆಗೆ ಟ್ವೀಟ್ ಮೇಲೆ ಟ್ವೀಟ್ ಮಾಡುತ್ತಾರೆ. ರಾತ್ರೋ ರಾತ್ರಿ ನೀರು ಬಿಟ್ಟು, ಮೋದಿ ಅವರನ್ನು ಕರೆದರೆ ಹೇಗೆ?" ಎಂದು ಪ್ರಶ್ನಿಸಿದರು.

"ಎಲ್ಲಿವರೆಗೂ ಮಗು ಅಳುವುದಿಲ್ಲ, ಅಲ್ಲಿಯವರೆಗೆ ತಾಯಿ ಹಾಲು ಕೊಡುವುದಿಲ್ಲ. ಅದಕ್ಕೆ ನಾವೂ ಇಂದು ನೀರಿಗಾಗಿ ಹೋರಾಟ ಮಾಡುತ್ತಿದ್ದೇವೆ. ನಿಮ್ಮ ದೋಸ್ತಿ, ಮೈತ್ರಿ ಉಳಿಸಿಕೊಳ್ಳಲು ನೀರು ಬಿಡುತ್ತಿದ್ದೀರಾ" ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net